alex Certify ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ ‘ನೆಲ ನೆಲ್ಲಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ ‘ನೆಲ ನೆಲ್ಲಿ’

ಹಳ್ಳಿಗಳ ಕಡೆ ತೋಟದ ಬದಿಯಲ್ಲಿ ಕಳೆ ರೀತಿ ಬೆಳೆಯುವ ಗಿಡ ನೆಲ ನೆಲ್ಲಿ. ಇದರ ಉಪಯೋಗದ ಬಗ್ಗೆ ಗೊತ್ತಿಲ್ಲದೇ ಕೆಲವರು ಇದನ್ನು ಕಿತ್ತು ಬಿಸಾಡುತ್ತಾರೆ. ಈ ನೆಲ ನೆಲ್ಲಿಯ ಎಲೆಗಳು ನೆಲ್ಲಿಯ ಮರದ ಎಲೆಗಳಂತೆ ಇರುತ್ತದೆ. ಜತೆಗೆ ಎಲೆಯ ಹಿಂದುಗಡೆ ಮುತ್ತು ಪೋಣಿಸಿದ ರೀತಿ ಚಿಕ್ಕ ಚಿಕ್ಕ ಹಸಿರು ಕಾಯಿಗಳು ಇದೆ. ಈ ಗಿಡ ಚಿಕ್ಕದಾದರೂ ಇದು ಆರೋಗ್ಯಕ್ಕೆ ಮಾತ್ರ ತುಂಬಾ ಒಳ್ಳೆಯದು.

ಅತಿಸಾರ ಭೇದಿಗೆ ಇದರ ಕಷಾಯ ಹೇಳಿಮಾಡಿಸಿದ್ದು. ಈ ಗಿಡದ ರಸವನ್ನು ಮಜ್ಜಿಗೆಯೊಂದಿಗೆ ಸೇರಿಸಿ ಕುಡಿದರೆ ಜಾಂಡೀಸ್ ಕೂಡ ಕಡಿಮೆಯಾಗುತ್ತದೆ.

ಇನ್ನು ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವವರು ಇದರ ರಸ ಹಚ್ಚಿಕೊಂಡರೆ ಕಡಿಮೆಯಾಗುತ್ತದೆ. ಹೆಂಗಳೆಯರಿಗೆ ಕಾಡುವ ರಕ್ತಸ್ರಾವ ಕೂಡ ಇದರ ಕಷಾಯ ಕುಡಿಯುವುದರಿಂದ ನಿಯಂತ್ರಣಕ್ಕೆ ಬರುತ್ತದೆ.

ಇದರ ಕಷಾಯವನ್ನು ವಾರಕ್ಕೆ 3 ದಿನ ಕುಡಿಯುತ್ತಾ ಬಂದರೆ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.

ಮಕ್ಕಳಲ್ಲಿ ಕಂಡು ಬರುವ ಜ್ವರ, ಶೀತದಂತಹ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ.

ಒಂದು ಗ್ಲಾಸ್ ನೀರಿಗೆ ಇದರ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ¼ ಗ್ಲಾಸ್ ಗೆ ಇಳಿಸಿ ಇದನ್ನು ಕುಡಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...