alex Certify ರೋಗಿ ಸೇವೆಗೆ ಬಂದ ನರ್ಸ್, ಮನೆಗೆ ಕನ್ನ ಹಾಕಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿ ಸೇವೆಗೆ ಬಂದ ನರ್ಸ್, ಮನೆಗೆ ಕನ್ನ ಹಾಕಿ ಪರಾರಿ

ರೋಗಿಯ ಸೇವೆಗೆ ನೇಮಕವಾಗಿದ್ದ ನರ್ಸ್ ಆ ಮನೆಗೆ ಕನ್ನ ಹಾಕಿ‌ ಪೊಲೀಸರ ಅತಿಥಿಯಾಗಿದ್ದಾಳೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ ಕದ್ದು ಪರಾರಿಯಾಗಿದ್ದ ನರ್ಸ್ ಪವಿತ್ರಳನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಮೃತಹಳ್ಳಿಯ ವೆಂಕಟ ಲೇಔಟ್ ನ ನಿವಾಸಿಯೊಬ್ಬರು, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಹೆಂಡತಿಯನ್ನ ನೋಡಿಕೊಳ್ಳಲು ಏಜೆನ್ಸಿಯಿಂದ ನರ್ಸ್ ಒಬ್ಬಳನ್ನ ನೇಮಕ ಮಾಡಿಕೊಂಡಿದ್ದರು. ಡಿ ನೋವಾ ಏಜೆನ್ಸಿಯಿಂದ ಪವಿತ್ರ ಎಂಬ ನರ್ಸ್ ನೇಮಕವಾಗಿದ್ದಳು.

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಒಂದು ವಾರ ಮಾಲೀಕನ ಪತ್ನಿಯ ಶುಶ್ರೂಷೆ ಮಾಡಿದ ಪವಿತ್ರ, ಎಂಟನೇ ದಿನ ರಾತ್ರಿ ಅಂದ್ರೆ ,ಡಿ.18 ರ ರಾತ್ರಿ ಮನೆಯ ಕಬೋರ್ಡ್ ನಲ್ಲಿದ್ದ ನಾಲ್ಕೂವರೆ ಲಕ್ಷ ಬೆಲೆಬಾಳುವ ಚಿನ್ನವನ್ನು ಕದ್ದು ಎಸ್ಕೇಪ್ ಆಗಿದ್ದಾಳೆ.‌ ಚಿನ್ನ ಕದ್ದಿರುವುದಲ್ಲದೆ, ತನ್ನ ತಾಯಿಗೆ ಹುಷಾರಿಲ್ಲ ಅಂತಾ ನೆಪ ಹೇಳಿ ಮನೆ ಮಾಲೀಕರಿಂದ ಹಣ ಪಡೆದಿದ್ದಾಳೆ. ಚಿನ್ನ ಕಳ್ಳತನದ ಬಗ್ಗೆ ದೂರು ನೀಡಿದ್ಮೇಲೆ, ಪೊಲೀಸರು ನರ್ಸ್ ಪವಿತ್ರಳನ್ನ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...