alex Certify ರೊಂಗಾಲಿ ಬಿಹು ಕಾರ್ಯಕ್ರಮದಲ್ಲಿ ಅನೇಕ ಸಂಗೀತ ವಾದ್ಯಗಳನ್ನು ಪ್ರಯೋಗಿಸಿದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೊಂಗಾಲಿ ಬಿಹು ಕಾರ್ಯಕ್ರಮದಲ್ಲಿ ಅನೇಕ ಸಂಗೀತ ವಾದ್ಯಗಳನ್ನು ಪ್ರಯೋಗಿಸಿದ ಪ್ರಧಾನಿ ಮೋದಿ

ನವದೆಹಲಿ: ರೊಂಗಾಲಿ ಬಿಹು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಲವು ಸಂಗೀತ ವಾದ್ಯಗಳನ್ನು ಪ್ರಯೋಗಿಸಿದ್ದಾರೆ.

ದೆಹಲಿಯ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರ ನಿವಾಸದಲ್ಲಿ ರೊಂಗಾಲಿ ಬಿಹು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಸಂಗೀತ ವಾದ್ಯಗಳನ್ನು ನುಡಿಸಿದ್ದಾರೆ.

ರೊಂಗಾಲಿ ಬಿಹು ಮತ್ತು ಬೊಹಾಗ್ ಬಿಹು ಎಂದೂ ಕರೆಯಲ್ಪಡುವ ಬಿಹು ಅಸ್ಸಾಮಿನ ಸುಗ್ಗಿಯ ಹಬ್ಬವಾಗಿದ್ದು, ಇದು ಅಸ್ಸಾಂನ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ.

ಇದಕ್ಕೂ ಮುನ್ನ ಏಪ್ರಿಲ್ 14 ರಂದು ಪ್ರಧಾನಿ ಮೋದಿ ಬಿಹು ಸಂದರ್ಭದಲ್ಲಿ ನಾಗರಿಕರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಹ್ಯಾಪಿ ಬೋಹಾಗ್ ಬಿಹು..! ಈ ವಿಶೇಷ ಹಬ್ಬವು ರೋಮಾಂಚಕ ಅಸ್ಸಾಮಿ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ಈ ಬಿಹು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಆಶಿಸುವುದಾಗಿ ಟ್ವೀಟ್ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...