alex Certify ರೈಲ್ವೇ ಪಾದಾಚಾರಿ ಮೇಲ್ಸೇತುವೆ ಕುಸಿದು ದುರಂತ; ಮಹಿಳೆ ಸಾವು 20 ಮಂದಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೇ ಪಾದಾಚಾರಿ ಮೇಲ್ಸೇತುವೆ ಕುಸಿದು ದುರಂತ; ಮಹಿಳೆ ಸಾವು 20 ಮಂದಿಗೆ ಗಾಯ

 

ಮಹಾರಾಷ್ಟ್ರ- ಮಹಾರಾಷ್ಟ್ರದ ಚಂದ್ರಾಪುರದ ಬಲಹರ್ಷಾ ರೈಲ್ವೆ ಜಂಕ್ಷನ್‌ನಲ್ಲಿ ಭಾನುವಾರ ಮೇಲ್ಸೇತುವೆ ಬಿದ್ದು ಸುಮಾರು ಜನ ಗಾಯಗೊಂಡಿದ್ದರು. ವರದಿಗಳ ಪ್ರಕಾರ ಸುಮಾರು 20 ಜನರಿಗೆ ಗಾಯಗಳಾಗಿದ್ದು, ಇದೀಗ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ನೀಲೀಮಾ ರಂಗೇರಿ ಎಂಬ ಮಹಿಳೆ ನಿನ್ನೆ ಮೇಲುಸೇತುವೆಯಿಂದ ಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಇವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಉಳಿದ ಗಾಯಾಳುಗಳ ಪೈಕಿ ಕೆಲವೊಬ್ಬರ ಸ್ಥಿತಿ ಚಿಂತಾಜನಕವಾಗಿದೆಯಂತೆ.

ಇನ್ನು, ರೈಲ್ವೆ ಇಲಾಖೆ ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ ಮತ್ತು ಸಣ್ಣ ಗಾಯಗಳಿಗೆ ಒಳಗಾದವರಿಗೆ 50,000 ರೂಪಾಯಿಗಳ ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಭಾನುವಾರ ಸಂಜೆ ಸುಮಾರು 5 ಗಂಟೆಗೆ ಬಲಹರ್ಷಾ ವಿಭಾಗದ ರೈಲು ನಿಲ್ದಾಣದಲ್ಲಿ ಫುಟ್ ಓವರ್ ಬ್ರಿಡ್ಜ್‌ನ ಪ್ರಿ-ಕಾಸ್ಟ್ ಸ್ಲ್ಯಾಬ್‌ನ ಬೃಹತ್ ಭಾಗವು ಬಿದ್ದಿದ್ದರಿಂದ ಈ ದುರ್ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...