alex Certify ರೈಲ್ವೆ ಪ್ರಯಾಣಿಕರಿಗೆ ಗುಡ್​​ ನ್ಯೂಸ್​: ಸ್ಥಳೀಯ ರೈಲುಗಳಲ್ಲಿ ಟಿವಿ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಪ್ರಯಾಣಿಕರಿಗೆ ಗುಡ್​​ ನ್ಯೂಸ್​: ಸ್ಥಳೀಯ ರೈಲುಗಳಲ್ಲಿ ಟಿವಿ ಸೌಲಭ್ಯ

ಮುಂಬೈನ ಸೆಂಟ್ರಲ್​ ರೈಲ್ವೆ ಹಾಗೂ ಶುಗರ್​ಬಾಕ್ಸ್​ ನೆಟ್​​ವರ್ಕ್​ಗಳು ಸ್ಥಳೀಯ ರೈಲುಗಳಲ್ಲಿ ಕಂಟೆಂಟ್​ ಆನ್​ ಡಿಮ್ಯಾಂಡ್​ ಎಂಬ ಹೊಸ ಸೇವೆಯನ್ನು ಆರಂಭಿಸಿದ್ದು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟಿವಿಯಲ್ಲಿ ಬರುವ ಕಾರ್ಯಕ್ರಮಗಳು, ಸಿನೆಮಾ ಹಾಗೂ ನ್ಯೂಸ್​ಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರಿಗೆ ಇನ್ಮುಂದೆ ರೈಲ್ವೆ ಪ್ರಯಾಣವು ಮನರಂಜನೆಯಿಂದ ಕೂಡಿರಲಿದೆ. ಮುಂಬೈ ಲೋಕಲ್​ ರೈಲುಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಈ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಆಕರ್ಷಕ ಹಾಗೂ ಅನುಕೂಲಕರವಾಗಿಸಲು ಶುಕ್ರವಾರದಿಂದ ಮುಂಬೈನ ಸ್ಥಳೀಯ ರೈಲುಗಳಲ್ಲಿ ಕಂಟೆಂಟ್​ ಆನ್​ ಡಿಮ್ಯಾಂಡ್​​ ಸೇವೆಯನ್ನು ಆರಂಭಿಸಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕೇಂದ್ರ ರೈಲ್ವೆ ಜಿಎಂ ಅನಿಲ್​ ಕುಮಾರ್​ ಲಹೋಟಿ, ಲೋಕಲ್​ ಟ್ರೈನು ಮುಂಬೈನ ಸಾರ್ವಜನಿಕ ಸಾರಿಗೆಯ ಬೆನ್ನುಲುಬಾಗಿದೆ. ಕೋವಿಡ್​​ ಸಾಂಕ್ರಾಮಿಕಕ್ಕೂ ಮುನ್ನ 45 ಲಕ್ಷಕ್ಕೂ ಅಧಿಕ ಮಂದಿ ಲೋಕಲ್​ ಟ್ರೇನುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಪ್ರಯಾಣಿಕರಿಗೆ ನಾವು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಮಾಡುವ ಮೂಲಕ ಒಳ್ಳೆಯ ಸೇವೆಯನ್ನು ನೀಡಲು ನಿರ್ಧರಿಸಿದ್ದೇವೆ. ಅಲ್ಲದೇ ಪ್ರಯಾಣಿಕರಿಗೆ ಸೇವೆಯನ್ನು ಅಭಿವೃದ್ಧಿಪಡಿಸಿದರೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...