alex Certify ರೈಲು ಹೊರಟು 10 ನಿಮಿಷಗಳ ನಂತರವೂ ಪ್ರಯಾಣಿಕ ಆಸನ ತಲುಪದಿದ್ದರೆ ರದ್ದಾಗಬಹುದು ಟಿಕೆಟ್….! ಇಲ್ಲಿದೆ ಹೊಸ ನಿಯಮದ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಹೊರಟು 10 ನಿಮಿಷಗಳ ನಂತರವೂ ಪ್ರಯಾಣಿಕ ಆಸನ ತಲುಪದಿದ್ದರೆ ರದ್ದಾಗಬಹುದು ಟಿಕೆಟ್….! ಇಲ್ಲಿದೆ ಹೊಸ ನಿಯಮದ ವಿವರ

ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಜನರು ರೈಲು ಪ್ರಯಾಣವನ್ನೇ ನೆಚ್ಚಿಕೊಳ್ತಿದ್ದಾರೆ. ಒಮ್ಮೊಮ್ಮೆ ಒಂದೆರಡು ಸೆಕೆಂಡ್‌ಗಳ ಅಂತರದಲ್ಲಿ ರೈಲು ತಪ್ಪಿಹೋಗುವುದುಂಟು. ಪ್ರಯಾಣಿಕರು ಒಂದು ಅಥವಾ ಎರಡು ನಿಲ್ದಾಣಗಳ ನಂತರವೂ ರೈಲು ಏರಬಹುದಿತ್ತು. ಟಿಟಿಇ ಅವರ ಹಾಜರಾತಿಯನ್ನು ಗುರುತಿಸುತ್ತಿದ್ದರು. ಆದರೆ ಈಗ ಪ್ರಯಾಣಿಕರು ರೈಲು ಹತ್ತುವಲ್ಲಿ 10 ನಿಮಿಷಕ್ಕಿಂತ ಹೆಚ್ಚು ಕಾಲ ತಡವಾದರೆ ಅವರ ಟಿಕೆಟ್ ರದ್ದುಗೊಳಿಸಿ ಬೇರೆ ಪ್ರಯಾಣಿಕರಿಗೆ ಸೀಟು ನೀಡುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ.

ವರದಿ ಪ್ರಕಾರ ರೈಲ್ವೆ ಇಲಾಖೆ ಈ ಬಗ್ಗೆ ಹೊಸ ನಿಯಮವನ್ನು ಜಾರಿ ಮಾಡಿದೆ. ಪ್ರಯಾಣಿಕರು ಎಲ್ಲಿಂದ ಟಿಕೆಟ್‌ ಬುಕ್ಕಿಂಗ್‌ ಮಾಡಿರುತ್ತಾರೋ ಅದೇ ನಿಲ್ದಾಣದಲ್ಲಿ ರೈಲು ಏರಬೇಕು. ಟಿಟಿಇ ತಪಾಸಣೆಯ ಸಮಯದಲ್ಲಿ ಅವರ ಸೀಟಿನಲ್ಲಿ ಪ್ರಯಾಣಿಕರು ಇಲ್ಲದಿದ್ದರೆ ಅವರು 10 ನಿಮಿಷಗಳ ಕಾಲ ಕಾಯುತ್ತಾರೆ. 10 ನಿಮಿಷಗಳೊಳಗೆ ಪ್ರಯಾಣಿಕರು ಬರದೇ ಇದ್ದರೆ ಅವರ ಅನುಪಸ್ಥಿತಿಯನ್ನು ದಾಖಲಿಸಲಾಗುತ್ತದೆ.

ಇದರೊಂದಿಗೆ ಆ ರದ್ದಾದ ಸೀಟನ್ನು ಬೇರೆ ಪ್ರಯಾಣಿಕರಿಗೆ ಹಂಚಲಾಗುತ್ತದೆ. ಇಲ್ಲಿಯವರೆಗೆ TTE ಲಿಸ್ಟ್‌ ಇಟ್ಟುಕೊಂಡು ಪ್ರಯಾಣಿಕರ ಹಾಜರಾತಿಯನ್ನು ಗುರುತಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ಮುಂದಿನ ಪ್ರಯಾಣಿಕರ ಬರುವಿಕೆಗಾಗಿ ಮುಂದಿನ ನಿಲ್ದಾಣದವರೆಗೆ ಕಾಯುತ್ತಿದ್ದರು. ಆದರೆ ಈಗ ಅವರಿಗೆ ಹ್ಯಾಂಡ್ ಹೋಲ್ಡ್ ಟರ್ಮಿನಲ್ ನೀಡಲಾಗಿದೆ. ಅದರ ಮೂಲಕ ಅವರು ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸುತ್ತಾರೆ ಮತ್ತು ಅವರ ಆಗಮನದ ವಿವರಗಳನ್ನು ಭರ್ತಿ ಮಾಡುತ್ತಾರೆ.

ವರದಿಯ ಪ್ರಕಾರ ಟಿಕೆಟ್ ಕಾಯ್ದಿರಿಸಿದ ನಂತರ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಸ್ಟೇಷನ್‌ನಿಂದಲೇ ರೈಲನ್ನು ಹತ್ತಬೇಕು ಮತ್ತು ತಮ್ಮ ಆಸನಗಳನ್ನು ತಲುಪಬೇಕು. ಅವರು ಹಾಗೆ ಮಾಡದಿದ್ದರೆ, ಅವರ ಟಿಕೆಟ್ಗಳನ್ನು ರದ್ದುಗೊಳಿಸಬಹುದು ಮತ್ತು ಇತರ ಪ್ರಯಾಣಿಕರಿಗೆ ನೀಡಬಹುದು. ಜನಸಂದಣಿಯಲ್ಲಿ ಸಿಲುಕಿಕೊಂಡರೆ ಅನೇಕ ಬಾರಿ ಆಸನವನ್ನು ತಲುಪಲು ತಡವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಪ್ರಯಾಣಿಕರು ಸ್ವಲ್ಪ ಹೆಚ್ಚುವರಿ ಸಮಯವನ್ನು ಪಡೆಯಬಹುದು. ಆದರೆ ಹಾಗೆ ಮಾಡುವುದರಿಂದ ಅಪಾಯದಿಂದ ಮುಕ್ತವಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ತಲುಪುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...