alex Certify ರೈಲಿನಲ್ಲಿ ರಾಜಾರೋಷವಾಗಿ ಮದ್ಯ ಸೇವನೆ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ರಾಜಾರೋಷವಾಗಿ ಮದ್ಯ ಸೇವನೆ; ವಿಡಿಯೋ ವೈರಲ್

ಮುಂಬೈನಲ್ಲಿ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರೊಬ್ಬರು ಮದ್ಯ ಸೇವಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.

ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಮುಂಬೈ ಪೊಲೀಸರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

“ಮುಂಬೈ ಪೋಲೀಸರೇ ಎರಡು ದಿನಗಳ ಹಿಂದೆ ನಾನು ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ಘಟನೆಯು ಪನ್ವೇಲ್ ನಿಲ್ದಾಣಕ್ಕೆ ತೆರಳುವ ವಡಾಲಾ ರಸ್ತೆಯಲ್ಲಿ ಸಂಭವಿಸಿದೆ. ಸ್ಥಳೀಯ ರೈಲಿನಲ್ಲಿ ಕುಡಿಯಲು ಅನುಮತಿ ಇದೆಯೇ? ಮುಂಬೈ ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ?” ಎಂದು ಬರೆದಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಪ್ರಕರಣದ ತನಿಖೆ ನಡೆಸುವಂತೆ ಮುಂಬೈ ರೈಲ್ವೇ ಪೊಲೀಸರನ್ನು (ಜಿಆರ್‌ಪಿ) ಕೇಳಿದ್ದೇವೆ ಎಂದು ಹೇಳಿದ್ದಾರೆ.

ಪ್ರಸ್ತುತ, ರೈಲು ಸೇರಿದಂತೆ ರೈಲ್ವೆ ಆವರಣದಲ್ಲಿ ಧೂಮಪಾನ ಮತ್ತು ಮದ್ಯಪಾನ ಅಥವಾ ಯಾವುದೇ ಅಮಲು ಪದಾರ್ಥಗಳನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ.

— S¥NDICATE (@s_ndicate) March 13, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...