alex Certify ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದೆ ‘ಜೈ ಶ್ರೀ ರಾಮ್’‌ ವಾಕ್ಯ: ಇದು ಆಂಧ್ರದ ಕೈಮಗ್ಗ ವ್ಯಾಪಾರಿಯ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದೆ ‘ಜೈ ಶ್ರೀ ರಾಮ್’‌ ವಾಕ್ಯ: ಇದು ಆಂಧ್ರದ ಕೈಮಗ್ಗ ವ್ಯಾಪಾರಿಯ ಸಾಧನೆ

ಧರ್ಮಾವರಂ: ರೇಷ್ಮೆ ಸೀರೆಯಲ್ಲಿ 13 ಭಾಷೆಗಳಲ್ಲಿ ಜೈ ಶ್ರೀ ರಾಮ್‌ ಎಂಬ ಪದವನ್ನು ಆಂಧ್ರದ ವ್ಯಕ್ತಿಯೊಬ್ಬರು ಬರೆದಿದ್ದು, ಇದೀಗ ಇದರ ಚಿತ್ರಗಳು ವೈರಲ್ ಆಗಿದೆ.

ಆಂಧ್ರಪ್ರದೇಶದ ಧರ್ಮಾವರಂನ ವ್ಯಕ್ತಿಯೊಬ್ಬರು 60 ಮೀಟರ್ ಉದ್ದದ ರೇಷ್ಮೆ ಸೀರೆಯಲ್ಲಿ 13 ಭಾರತೀಯ ಭಾಷೆಗಳಲ್ಲಿ 32,200 ಬಾರಿ ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ. ಈ ಮೂಲಕ ಶ್ರೀರಾಮನಲ್ಲಿ ತಮ್ಮ ಅನನ್ಯ ಭಕ್ತಿಯನ್ನು ತೋರಿಸಿದ್ದಾರೆ.

ವರದಿ ಪ್ರಕಾರ, ರೇಷ್ಮೆ ಬಟ್ಟೆಯು 60 ಮೀಟರ್ ಉದ್ದ, 44 ಇಂಚು ಅಗಲವಿದೆ ಮತ್ತು ಜೈ ಶ್ರೀ ರಾಮ್ ಎಂಬ ಘೋಷಣೆಯನ್ನು 13 ಭಾರತೀಯ ಭಾಷೆಗಳಲ್ಲಿ 32,200 ಬಾರಿ ನೇಯಲಾಗಿದೆ.

ನೇಕಾರನನ್ನು ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನ ಕೈಮಗ್ಗ ನೇಕಾರ 40 ವರ್ಷದ ಜುಜಾರು ನಾಗರಾಜು ಎಂದು ಗುರುತಿಸಲಾಗಿದೆ. ಅವರು ಒಂದು ರೀತಿಯ ವಿಶೇಷ ರೇಷ್ಮೆ ಸೀರೆಯನ್ನು ರಾಮ ಕೋಟಿ ವಸ್ತ್ರಂ ಎಂದು ಹೆಸರಿಸಿದ್ದಾರೆ. ವಿವಿಧ ಭಾಷೆಗಳಲ್ಲಿನ ಘೋಷಣೆಗಳಷ್ಟೇ ಅಲ್ಲ, ಸೀರೆಯು ರಾಮಾಯಣದ ಸುಂದರಕಾಂಡದಿಂದ ಭಗವಾನ್ ರಾಮನ 168 ವಿಭಿನ್ನ ಚಿತ್ರಾತ್ಮಕ ಚಿತ್ರಣಗಳನ್ನು ಸಹ ಹೊಂದಿದೆ.

ಅಂದಹಾಗೆ ಈ ಕಾರ್ಯವನ್ನು ಸಾಧಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ವಿಶಿಷ್ಟವಾದ ಸೀರೆಯನ್ನು ತಯಾರಿಸಲು ಸಾಕಷ್ಟು ಶ್ರಮ ಮತ್ತು ಹಣ ವ್ಯಯಿಸಲಾಗಿದೆ. ನಾಗರಾಜು ಅವರು 16 ಕೆ.ಜಿ ತೂಕದ ರೇಷ್ಮೆ ಬಟ್ಟೆಯನ್ನು ವಿನ್ಯಾಸಗೊಳಿಸಲು ಮತ್ತು ನೇಯ್ಗೆ ಮಾಡಲು 4 ತಿಂಗಳುಗಳನ್ನು ಕಳೆದಿದ್ದಾರೆ.

ಅವರೊಂದಿಗೆ ಇತರೆ ಮೂವರು ಉಡುಪನ್ನು ರಚಿಸಲು ಪ್ರತಿದಿನ ಕೆಲಸ ಮಾಡಿದ್ದಾರೆ. ಇದೀಗ ಈ ಸೀರೆಯನ್ನು ಅಯೋಧ್ಯೆ ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...