alex Certify ರೆಸ್ಟೋರೆಂಟ್​​​ನಲ್ಲಿ ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ- ವಿಜಯ್​ ದೇವರಕೊಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಸ್ಟೋರೆಂಟ್​​​ನಲ್ಲಿ ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ- ವಿಜಯ್​ ದೇವರಕೊಂಡ..!

ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್​ ದೇವರಕೊಂಡ ಹೆಸರು ಥಳುಕು ಹಾಕಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೆ. ಗೀತ ಗೋವಿಂದಂ ಹಾಗೂ ಡಿಯರ್​ ಕಾಮ್ರೆಡ್​ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ ಬಳಿಕ ಇಬ್ಬರ ನಡುವಿನ ಸ್ನೇಹ ಇನ್ನಷ್ಟು ಗಾಢವಾಗಿದೆ ಎನ್ನಲಾಗಿದೆ. ಈ ಸ್ಟಾರ್ ನಟರು ಆಗಾಗ ಜಿಮ್​ನ ಹೊರಗೆ ಹಾಗೂ ರೆಸ್ಟಾರೆಂಟ್​​ಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ.

ನಾವಿಬ್ಬರು ಆತ್ಮೀಯ ಸ್ನೇಹಿತರು ಎಂದು ಹೇಳಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಬಾಂಡ್​ ನೋಡಿದ ಅಭಿಮಾನಿಗಳಂತೂ ಇವರಿಬ್ಬರು ಆದಷ್ಟು ಬೇಗ ರಿಯಲ್​ ಲೈಫ್​ ಜೋಡಿಗಳಾಗಲಿ ಎಂದು ಬೇಡಿಕೊಳ್ತಿದ್ದಾರೆ.

ಭಾನುವಾರ ರಶ್ಮಿಕಾ ಹಾಗೂ ದೇವರಕೊಂಡ ಮುಂಬೈನ ಬಾಂದ್ರಾದಲ್ಲಿರುವ ಪ್ರಸಿದ್ಧ ರೆಸ್ಟಾರೆಂಟ್​ ಒಂದರಲ್ಲಿ ಕಾಣಿಸಿಕೊಂಡರು. ಇಬ್ಬರು ಜೊತೆಯಾಗಿ ರೆಸ್ಟಾರೆಂಟ್​ಗೆ ಭೇಟಿ ನೀಡಿದ ಫೋಟೋಗಳು ಪೆಪ್ಪಾರಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

ರೆಸ್ಟಾರೆಂಟ್​ಗೆ ಇಬ್ಬರು ಕ್ಯಾಶುವಲ್​ ಆಗಿ ತಯಾರಾಗಿ ಬಂದಿದ್ದಾರೆ. ವಿಜಯ್​ ದೇವರಕೊಂಡ ಟೈಗರ್​ ಪ್ರಿಂಟ್​ ಶರ್ಟ್​, ಗಾಢ ಹಸಿರು ಬಣ್ಣದ ಪ್ಯಾಂಟ್​ ಹಾಗೂ ಬಿಳಿ ಬಣ್ಣದ ಶೂನಲ್ಲಿ ಕಾಣಿಸಿಕೊಂಡರೆ ನಟಿ ರಶ್ಮಿಕಾ ಮಂದಣ್ಣ ಕಪ್ಪು ಬಣ್ಣದ ಜಾಕೆಟ್​ , ಕಪ್ಪು ಬಣ್ಣದ ಟಾಪ್​​, ಕಪ್ಪು ಬಣ್ಣದ ಪ್ಯಾಂಟ್​ ನಲ್ಲಿ ಕಾಣಿಸಿಕೊಂಡರು.

ಇತ್ತೀಚಿನ ದಿನಗಳಲ್ಲಿ ವಿಜಯ್​ ಹಾಗೂ ರಶ್ಮಿಕಾ ಬಾಲಿವುಡ್​ಗೆ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ. ವಿಜಯ್​ ದೇವರಕೊಂಡ ಅನನ್ಯಾ ಪಾಂಡೆ ಜೊತೆ ನಟಿಸುತ್ತಿದ್ದರೆ ನಟಿ ರಶ್ಮಿಕಾ ಮಂದಣ್ಣ ಮಿಷನ್​ ಮಜನು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರ ಜೊತೆಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...