alex Certify ರುಚಿಕರವಾದ ‘ರವಾ ಕೇಕ್’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ‘ರವಾ ಕೇಕ್’ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ರುಚಿಕರವಾದ ಕೇಕ್ ಮಾಡಿಕೊಂಡು ಸವಿಯಿರಿ.

ಬೇಕಾಗುವ ಸಾಮಗ್ರಿಗಳು:

50 ಗ್ರಾಂ ಸಕ್ಕರೆ, 3 ಟೇಬಲ್ ಸ್ಪೂನ್ –ಬೆಣ್ಣೆ, 3 ಟೇಬಲ್ ಸ್ಪೂನ್ –ಮೊಸರು, ½ ಕಪ್-ರವಾ, ¼ ಟೀ ಸ್ಪೂನ್ -ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ -ಚಿಟಿಕೆ, ¼ ಕಪ್ -ಹಾಲು.

ಮಾಡುವ ವಿಧಾನ:

ಒಂದು ಬೌಲ್ ಗೆ ಸಕ್ಕರೆ, ಬೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಮೊಸರು ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ½ ಕಪ್ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಇದಕ್ಕೆ 2 ಟೇಬಲ್ ಸ್ಪೂನ್ ಕೋಕೋ ಪೌಡರ್, ¼ ಕಪ್ ಹಾಲು ಹಾಕಿ ಮಿಶ್ರಣ ಮಾಡಿಕೊಳ್ಳಿ. ½ ಚಮಚ ವೆನಿಲ್ಲಾ ಎಸೆನ್ಸ್ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. 10 ನಿಮಿಷ ಹಾಗೇ ಬಿಡಿ. ನಂತರ ಒಂದು ಪಾತ್ರೆಗೆ ಅರ್ಧ ಕಪ್ ನೀರು ಹಾಕಿ ಕುದಿಸಿಕೊಳ್ಳಿ.

ನಂತರ ಇನ್ನೊಂದು ಒಂದು ಕೇಕ್ ಮೌಲ್ಡ್ ಗೆ ಸ್ವಲ್ಪ ತುಪ್ಪ ಸವರಿಕೊಳ್ಳಿ. ನಂತರ ರವೆಯ ಮಿಶ್ರಣಕ್ಕೆ ¼ ಟೀ ಸ್ಪೂನ್ ಬೇಕಿಂಗ್ ಪೌಡರ್, ಚಿಟಿಕೆ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಇದನ್ನು ಕೇಕ್ ಮೌಲ್ಡ್ ಗೆ ಹಾಕಿ. ನಂತರ ಈ ಕೇಕ್ ಅನ್ನು ಗ್ಯಾಸ್ ನಲ್ಲಿ ಕುದಿಯುತ್ತಿದ್ದ ನೀರಿನ ಪಾತ್ರೆಯೊಳಗೆ ಇಟ್ಟು ಒಂದು ಪ್ಲೇಟ್ ಮುಚ್ಚಿ ಮೇಲೆ ಮತ್ತೊಂದು ಮುಚ್ಚಳ ಮುಚ್ಚಿ 40 ನಿಮಿಷ ಬೇಯಿಸಿಕೊಳ್ಳಿ. ನಂತರ ಕೇಕ್ ತಣ್ಣಗಾಗಲು ಬಿಡಿ. ನಂತರ ಈ ಕೇಕ್ ಅನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...