alex Certify ಇಲ್ಲಿದೆ ರುಚಿಕರವಾದ ‘ಬೂಂದಿ’ ಲಾಡು ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರುಚಿಕರವಾದ ‘ಬೂಂದಿ’ ಲಾಡು ಮಾಡುವ ವಿಧಾನ

 

Boondi Laddu Recipe – How to make Boondi Ladooಸಿಹಿ ಎಂದರೆ ತುಂಬಾ ಜನರಿಗೆ ಇಷ್ಟ. ಅದರಲ್ಲಿ ಬೂಂದಿ ಲಾಡು ಇದ್ದರೆ ಕೇಳಬೇಕಾ…? ಇದು ಸರಿಯಾಗಿ ಹದ ಗೊತ್ತಾಗಲ್ಲ ಎಂದು ಮಾಡದೇ ಇರುವವರೇ ಹೆಚ್ಚು. ಇಲ್ಲಿ ಸುಲಭವಾಗಿ ಮಾಡುವ ವಿಧಾನ ಇದೆ ನೋಡಿ.

ಬೇಕಾಗುವ ಸಾಮಗ್ರಿಗಳು:

ಕಡಲೆಹಿಟ್ಟು – 1 ಕಪ್, ಅಡುಗೆ ಸೋಡಾ – 1/8 ಟೀ ಸ್ಪೂನ್, ಹಳದಿ ಬಣ್ಣದ ಫುಡ್ ಕಲರ್ – ಸ್ವಲ್ಪ, ನೀರು 1 ಕಪ್, ಸಕ್ಕರೆ – 1 ¼ ಕಪ್, ಏಲಕ್ಕಿ ಪುಡಿ – 1 ಟೀ ಸ್ಪೂನ್, ಲವಂಗ ಪುಡಿ – 1/2 ಟೀ ಸ್ಪೂನ್, ಗೋಡಂಬಿ – 10 ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ದ್ರಾಕ್ಷಿ – 15 ಪೀಸ್, ಎಣ್ಣೆ – ಕರಿಯಲು, ತುಪ್ಪ – 1 ಟೀ ಸ್ಪೂನ್.

ಮಾಡುವ ವಿಧಾನ:

ಮೊದಲಿಗೆ ಒಂದು ಬೌಲ್ ಗೆ ಕಡಲೆಹಿಟ್ಟನ್ನು ಜರಡಿ ಹಿಡಿದುಕೊಂಡು ಇದಕ್ಕೆ ಸ್ವಲ್ಪಸ್ವಲ್ಪವೇ ನೀರು ಸೇರಿಸಿ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿ ಮಾಡಿಕೊಳ್ಳಿ. ಇದಕ್ಕೆ ಅಡುಗೆ ಸೋಡಾ, ಫುಡ್ ಕಲರ್ ಸೇರಿಸಿ ಮಿಕ್ಸ್ ಮಾಡಿ. ಗ್ಯಾಸ್ ಮೇಲೆ ಎಣ್ಣೆ ಬಾಣಲೆ ಇಡಿ. ಇದು ಕಾದ ನಂತರ ಚಿಕ್ಕ ಚಿಕ್ಕ ತೂತಿರುವ ಸೌಟಿನ ಸಹಾಯದಿಂದ ಈ ಹಿಟ್ಟನ್ನು ಎಣ್ಣೆಯ ಬಾಣಲೆಗೆ ಬಿಡಿ. ಚೆನ್ನಾಗಿ ಫ್ರೈ ಮಾಡಿ. ಈ ಬೂಂದಿಯನ್ನು ಒಂದು ತಟ್ಟೆಗೆ ತೆಗೆದುಕೊಳ್ಳಿ.

ನಂತರ ಒಂದು ಪ್ಯಾನ್ ಗೆ ಸಕ್ಕರೆಯನ್ನು ಹಾಕಿ ಅದಕ್ಕೆ ½ ಕಪ್ ನೀರು ಸೇರಿಸಿ ಕುದಿಸಿಕೊಳ್ಳಿ. ಇದು ಒಂದೆಳೆ ಪಾಕ ಬರುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿ, ಲವಂಗದ ಪುಡಿ, ಚಿಟಿಕೆ ಫುಡ್ ಕಲರ್ ಸೇರಿಸಿ ಮಿಕ್ಸ್ ಮಾಡಿ. ‌

ನಂತರ ಬೂಂದಿಯನ್ನು ಇದಕ್ಕೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಒಗ್ಗರಣೆ ಹಾಕುವ ಸೌಟಿಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ ಹುರಿದುಕೊಳ್ಳಿ. ಇದನ್ನು ಬೂಂದಿ ಸಕ್ಕರೆ ಮಿಶ್ರಣವಿರುವ ಪಾತ್ರೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉಂಡೆ ಕಟ್ಟಿ 3 ಗಂಟೆಗಳ ಹೊತ್ತು ಹಾಗೆಯೇ ಬಿಡಿ. ರುಚಿಕರವಾದ ಬೂಂದಿ ಲಡ್ಡು ಈಗ ಸವಿಯಲು ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...