alex Certify ರುಚಿಕರವಾದ ಈರುಳ್ಳಿ ಚಟ್ನಿ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ಈರುಳ್ಳಿ ಚಟ್ನಿ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು:

ಒಣಮೆಣಸು – 8, ಹುಣಸೆಹಣ್ಣು – ಸ್ವಲ್ಪ, ಎಣ್ಣೆ – ಸ್ವಲ್ಪ, ಮೆಂತ್ಯ ಕಾಳು – ¼ ಟೀ ಸ್ಪೂನ್, ಕೊತ್ತಂಬರಿ ಬೀಜ – 1 ಟೀ ಸ್ಪೂನ್, ಈರುಳ್ಳಿ – 3, ರುಚಿಗೆ ತಕ್ಕಷ್ಟು ಉಪ್ಪು, ಸಾಸಿವೆ – 1 ಟೀ ಸ್ಪೂನ್, ಉದ್ದಿನ ಬೇಳೆ – 1 ಟೀ ಸ್ಪೂನ್, ಕರಿಬೇವಿನ ಎಲೆ – 7 ರಿಂದ 8, ಬೆಳ್ಳುಳ್ಳಿ ಎಸಲು – 2, ಚಿಟಿಕೆ ಇಂಗು.

ಮಾಡುವ ವಿಧಾನ:

ಅರ್ಧ ನಿಂಬೆ ಹಣ್ಣು ಗಾತ್ರದ ಹುಣಸೆಹಣ್ಣನ್ನು ಸ್ವಲ್ಪ ನೀರು ಹಾಕಿ ಹಿಂಡಿ ನೆನೆಸಿಡಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ¼ ಚಮಚ ಮೆಂತ್ಯ ಕಾಳು ಹಾಕಿ, 1 ಟೀ ಸ್ಪೂನ್ ನಷ್ಟು ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. ಬಳಿಕ 8 ಒಣಮೆಣಸಿನಕಾಯಿ ಹಾಕಿ ಖಾರಕ್ಕೆ ಅನುಗುಣವಾಗಿ ಹಾಕಿ ಹುರಿದುಕೊಳ್ಳಿ. ಬಳಿಕ ಅದನ್ನು ಪಕ್ಕಕ್ಕಿಟ್ಟು ಅದೇ ಬಾಣಲೆಗೆ ಸಣ್ಣಗೆ ಹೆಚ್ಚಿರುವ 3 ಈರುಳ್ಳಿಯನ್ನು ಚೆನ್ನಾಗಿ ಫ್ರೈ ಮಾಡಿ.

ಇದಕ್ಕೆ ನೆನೆಸಿಟ್ಟ ಹುಣಸೆಹಣ್ಣನ್ನು ಹಿಂಡಿ ರಸ ಹಾಕಿ. ಮಧ್ಯಮ ಉರಿಯಲ್ಲಿ 5 ನಿಮಿಷದಷ್ಟು ಚೆನ್ನಾಗಿ ಬೇಯಿಸಿ. ಈಗಾಗಲೇ ಹುರಿದಿರುವ ಮೆಣಸಿನಕಾಯಿ, ಕೊತ್ತಂಬರಿ ಬೀಜ ವನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಜೊತೆಗೆ ಫ್ರೈ ಮಾಡಿರುವ ಈರುಳ್ಳಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಒಗ್ಗರಣೆಗೆ ಸ್ವಲ್ಪ ಎಣ್ಣೆ, 1 ಟೀ ಸ್ಪೂನ್ ಸಾಸಿವೆ, 1 ಟೀ ಸ್ಪೂನ್ ಉದ್ದಿನ ಬೇಳೆ, 7-8 ಕರಿಬೇವಿನ ಎಲೆ, 2 ಬೆಳ್ಳುಳ್ಳಿ ಎಸಲು, ಚಿಟಿಕೆ ಇಂಗು ಹಾಕಿ ಸ್ವಲ್ಪ ಫ್ರೈ ಮಾಡಿ. ಬಳಿಕ ಸ್ಟೌನಲ್ಲಿ ಇಟ್ಟಿರುವ ಈ ಒಗ್ಗರಣೆಗೆ ಚಟ್ನಿಯನ್ನು ಹಾಕಿ ಸ್ಪಲ್ಪ ಹಾಗೆಯೇ ತಿರುವಿದರೆ ರುಚಿ ರುಚಿಯಾದ ಈರುಳ್ಳಿ ಚಟ್ನಿ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...