ಸಂಜೆ ಸಮಯಕ್ಕೆ ಬಿಸಿ ಬಿಸಿಯಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ರುಚಿಕರವಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುವ ವಿಧಾನ ಇಲ್ಲಿದೆ ನೋಡಿ.
5 ಟೊಮೆಟೊಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಎರಡು ಭಾಗ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ 5 ಕಾಳು ಕಾಳು ಮೆಣಸು, 1/ 2 ಟೇಬಲ್ ಸ್ಪೂನ್ ಕೊತ್ತಂಬರಿ ಬೀಜ, 1 ಟೇಬಲ್ ಸ್ಪೂನ್ ಜೀರಿಗೆ, ಚಿಕ್ಕ ಪೀಸ್ ಚಕ್ಕೆ, 1 ಏಲಕ್ಕಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ 1/4 ಕಪ್ ಈರುಳ್ಳಿ, 4 ಎಸಳು ಬೆಳ್ಳುಳ್ಳಿ, 2 ಟೇಬಲ್ ಸ್ಪೂನ್ ಶುಂಠಿ ತುರಿ, ಚಿಕ್ಕದ್ದಾಗಿ ಕತ್ತರಿಸಿಕೊಂಡು ಕ್ಯಾರೆಟ್ ಪೀಸ್ 2 ಟೇಬಲ್ ಸ್ಪೂನ್ ಹಾಕಿ ಫ್ರೈ ಮಾಡಿಕೊಳ್ಳಿ.
ನಂತರ ¾ ಟೇಬಲ್ ಸ್ಪೂನ್ ಖಾರದ ಪುಡಿ ಹಾಕಿ ನಂತರ ಟೊಮೆಟೊ ಹಾಕಿ ಸ್ವಲ್ಪ ಉಪ್ಪು, 2 ಟೇಬಲ್ ಸ್ಪೂನ್ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಒಂದು ಮುಚ್ಚಳ ಮುಚ್ಚಿ. ನಂತರ 10 ನಿಮಿಷಗಳ ನಂತರ ಅದಕ್ಕೆ 2 ಕಪ್ ನೀರು ಹಾಕಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಬೆಂದ ಟೊಮೆಟೊ ಮಿಶ್ರಣವನ್ನು ಶೋಧಿಸಿಕೊಳ್ಳಿ. ಶೋಧಿಸಿಕೊಳ್ಳುವಾಗ ಟೊಮೆಟೊ ಕ್ಯಾರೆಟ್ ಮಿಶ್ರಣವನ್ನು ಒಂದು ಚಮಚದ ಸಹಾಯದಿಂದ ಒತ್ತಿಕೊಳ್ಳಿ. ನಂತರ ಶೋಧಿಸಿದ ಸೂಪ್