alex Certify ರಿಲಯನ್ಸ್​ ಜಿಯೋ ಸೇವೆಯಲ್ಲಿ ವ್ಯತ್ಯಯ..! ಕರೆ ಮಾಡಲು ಪರದಾಡಿದ ಮುಂಬೈ ಗ್ರಾಹಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಯನ್ಸ್​ ಜಿಯೋ ಸೇವೆಯಲ್ಲಿ ವ್ಯತ್ಯಯ..! ಕರೆ ಮಾಡಲು ಪರದಾಡಿದ ಮುಂಬೈ ಗ್ರಾಹಕರು

ಮುಂಬೈನಲ್ಲಿರುವ ಹಲವಾರು ರಿಲಯನ್ಸ್​ ಜಿಯೋ ಬಳಕೆದಾರರು ಕರೆಗಳನ್ನು ಸ್ವೀಕರಿಸಲು ಅಥವಾ ಕರೆಗಳನ್ನು ಮಾಡಲು ಸಾಧ್ಯವಾಗದೇ ಅಡಚಣೆಯನ್ನು ಅನುಭವಿಸಿದ್ದಾರೆ.

ಈ ಸಂಬಂಧ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಿಯೋ ಬಳಕೆದಾರರು ತಾವು ಇಂಟರ್ನೆಟ್​ ಸೇವೆಯಲ್ಲಿ ವ್ಯತ್ಯಯ ಕಾಣುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ರಿಲಯನ್ಸ್​ ಜಿಯೋ ಬಳಕೆದಾರರು ಕರೆಗಳನ್ನು ಮಾಡಲು ಮುಂದಾದಾಗಲೆಲ್ಲ ನಾಟ್​ ರಿಜಿಸ್ಟ್ರರ್ಡ್​ ಆನ್​ ನೆಟ್​ವರ್ಕ್​ ಎಂಬ ಸಂದೇಶವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಇಂದು ಜಿಯೋ ನೆಟ್​​ವರ್ಕ್​ ಮುಂಬೈನಲ್ಲಿ ವ್ಯತ್ಯಯಗೊಂಡಿದೆ. ಈ ಸಮಸ್ಯೆಯು ಇನ್ಯಾವುದೇ ನಗರದಲ್ಲಿ ಉಂಟಾಗಿದೆಯೇ..? ಎಂದು ನಾಗಪಾಲ್​ ಮನೋಜ್​ ಎಂಬವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ಇನ್ನೊಬ್ಬ ಟ್ವೀಟರ್​ ಬಳಕೆದಾರ ತಾನು ಕಳೆದ 2 ದಿನಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿರೋದಾಗಿ ಹೇಳಿದ್ದಾರೆ.

ಇನ್ನು ಕೆಲವರು ಮುಂಬೈನಲ್ಲಿ ತಮಗೆ ಏರ್​ಟೆಲ್​​ ನೆಟ್​ವರ್ಕ್​ನಿಂದಲೂ ಸಮಸ್ಯೆ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ರಿಲಯನ್ಸ್​ ಜಿಯೋ ಕಂಪನಿಯು ಈವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಹೀಗಾಗಿ ಇದು ಮುಂಬೈನ ಪ್ರತಿಯೊಬ್ಬ ಜಿಯೋ ಬಳಕೆದಾರರಿಗೂ ಕಂಡು ಬಂದ ಸಮಸ್ಯೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...