alex Certify ರಾಹುಲ್ ಗಾಂಧಿಗೆ ಲಿಂಗಧಾರಣೆ ಮಾಡಿದ ಮುರುಘಾ ಶ್ರೀಗಳು; ವಿಭೂತಿ ಹಚ್ಚಿ ಆಶೀರ್ವಾದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿಗೆ ಲಿಂಗಧಾರಣೆ ಮಾಡಿದ ಮುರುಘಾ ಶ್ರೀಗಳು; ವಿಭೂತಿ ಹಚ್ಚಿ ಆಶೀರ್ವಾದ

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮಕ್ಕಾಗಿ ಕರ್ನಾಟಕಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದರ ಮಧ್ಯೆ ಇಂದು ಬೆಳಗ್ಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ.

ಮುರುಘಾ ಶ್ರೀಗಳ ದರ್ಶನದ ವೇಳೆ ಲಿಂಗಧಾರಣೆ ಕುರಿತು ರಾಹುಲ್ ಗಾಂಧಿ ಆಸಕ್ತಿಯಿಂದ ಮಾಹಿತಿ ಕೇಳಿದ್ದು, ಈ ವೇಳೆ ಶ್ರೀಗಳು, ರಾಹುಲ್ ಗಾಂಧಿಯವರಿಗೆ ಲಿಂಗ ಧಾರಣೆ ಮಾಡಿ ವಿಭೂತಿ ಹಚ್ಚಿ ಆಶೀರ್ವದಿಸಿದ್ದಾರೆ. ಅಲ್ಲದೆ ಇದರ ಮಹತ್ವವನ್ನು ವಿವರಿಸಿದ್ದಾರೆ.

ಬಳಿಕ ರಾಹುಲ್ ಗಾಂಧಿ, ಚಿತ್ರದುರ್ಗದ ಮುರುಘಾ ಮಠದಿಂದ ಸಮಾವೇಶ ನಡೆಯಲಿರುವ ದಾವಣಗೆರೆಯತ್ತ ತೆರಳುತ್ತಿದ್ದು ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಸಾಥ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...