alex Certify ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಸುಲೋಚನಾಗೆ ಪದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಸುಲೋಚನಾಗೆ ಪದಕ

ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ನಗರದ ಸುಲೋಚನಾ ಸಿ. ಅವರು 63 ಕೆಜಿ ಮಾಸ್ಟರ್ 1 ವಿಭಾಗದಲ್ಲಿ 390 ಕೆಜಿ ಭಾರ ಎತ್ತಿ ʼ2022 ಮಾಸ್ಟರ್ ಸ್ಟ್ರಾಂಗ್ ವುಮೆನ್ 2ʼ ಬಿರುದು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇವರು ನೆಹರು ಸ್ಟೇಡಿಯಂ ಜಿಮ್ ಮತ್ತು ವರ್ಲ್ಡ್ ಸ್ಪೋರ್ಟ್ಸ್ ಫಿಟ್ನೆಸ್ ಜಿಮ್ ನಲ್ಲಿ ಅಭ್ಯಾಸ ಪಡೆಯುತ್ತಿದ್ದಾರೆ. ತರಬೇತಿದಾರ ನಾಗರಾಜ ಕೆ.ಎಲ್. ಅವರಿಂದ ತರಬೇತಿ ಪಡೆದಿದ್ದಾರೆ.

ಅವರಿಗೆ ವರ್ಲ್ಡ್ ಸ್ಪೋರ್ಟ್ಸ್ ಫಿಟ್ನೆಸ್ ಜಿಮ್ ಮಾಲೀಕ ಶರವಣ ಎ.ಆರ್. ಹಾಗೂ ಶಿವಮೊಗ್ಗ ಜನತೆ ಅಭಿನಂದನೆ ಸಲ್ಲಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಗೆದ್ದು ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...