alex Certify ರಾಷ್ಟ್ರಪತಿ ಚುನಾವಣೆ ಮತದಾನಕ್ಕೆ ಸ್ಟ್ರೆಚರ್​ನಲ್ಲಿ ಬಂದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರಪತಿ ಚುನಾವಣೆ ಮತದಾನಕ್ಕೆ ಸ್ಟ್ರೆಚರ್​ನಲ್ಲಿ ಬಂದ ಶಾಸಕ

ರಾಷ್ಟ್ರಪತಿ ಚುನಾವಣೆಗೆ ಸೋಮವಾರ ದೇಶಾದ್ಯಂತ ಮತದಾನ ನಡೆದಿದೆ. ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ವೀಲ್​ ಚೇರ್​ನಲ್ಲಿ ಮತದಾನ ಮಾಡಲು ಆಗಮಿಸಿದರೆ, ಬಿಹಾರದಲ್ಲಿ ಬಿಜೆಪಿ ಶಾಸಕ ಸ್ಟ್ರೆಚರ್​ನಲ್ಲಿ ಆಗಮಿಸಿದ್ದರು.

ಎನ್​ಡಿಎ ಅಭ್ಯಥಿರ್ಯಾಗಿ ದ್ರೌಪತಿ ಮುರ್ಮು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ. ಇವರಿಬ್ಬರು ನಡುವೆ ಸಾಕಷ್ಟು ಪೈಪೋಟಿಯೂ ಕಾಣಿಸಿತ್ತು. ಎನ್​ಡಿಎ ಅಭ್ಯರ್ಥಿ ಸೋಲಿಸಲು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರಯತ್ನ ಸಹ ನಡೆದಿದ್ದು, ಕಾಂಗ್ರೆಸ್​ ಅವರನ್ನು ಬೆಂಬಲಿಸಿತ್ತು.

ಈ ನಡುವೆ ಸೋಮವಾರ ನಡೆದ ಮತದಾನ ಸಾಕಷ್ಟು ವಿಶೇಷತೆಯಿಂದ ಕೂಡಿತ್ತು. ಬಿಹಾರ ವಿಧಾನಸಭೆಯಲ್ಲಿ ಸಿದ್ಧಗೊಂಡ ವ್ಯವಸ್ಥೆಯಲ್ಲಿ ಅಲ್ಲಿನ ಜನಪ್ರತಿನಿಧಿಗಳು ಮತದಾನ ಮಾಡಿದರು. ಇವರ ನಡುವೆ ಬಿಜೆಪಿ ಶಾಸಕ ಮಿಥಿಲೇಶ್​ ಕುಮಾರ್​ ಸ್ಟ್ರೆಚರ್​ನಲ್ಲಿ ಬಂದಿದ್ದರು. ರಸ್ತೆ ಅಪಘಾತದಿಂದಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಹಾರದಿಂದ ಒಟ್ಟು 56 ಸಂಸದರಿದ್ದಾರೆ. 40 ಲೋಕಸಭೆ ಮತ್ತು 16 ರಾಜ್ಯಸಭಾ ಸದಸ್ಯರು. ಒಟ್ಟಾಗಿ 39,200 ಮತ ಮೌಲ್ಯವನ್ನು ಹೊಂದಿವೆ. ಈ ಪೈಕಿ ಮುರ್ಮು 33,600 ಗಳಿಸುವ ನಿರೀಕ್ಷೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...