alex Certify ರಾಶಿಗನುಗುಣವಾಗಿರಲಿ ಗಣೇಶನ ʼಸ್ಥಾಪನೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಶಿಗನುಗುಣವಾಗಿರಲಿ ಗಣೇಶನ ʼಸ್ಥಾಪನೆʼ

ಭಾದ್ರಪದ ಶುದ್ಧ ಚೌತಿಯಂದು ಭಾರತದಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ಹಬ್ಬ ಗಣೇಶ ಚತುರ್ಥಿ. ಮಣ್ಣಿನ ಗಣೇಶನ ಮೂರ್ತಿ ಮಾಡಿ ಪೂಜಿಸಿ ಹಬ್ಬದ ನಂತರ ನೀರಲ್ಲಿ ವಿಸರ್ಜನೆ ಮಾಡಲಾಗುತ್ತೆ.

ಗಣೇಶನ ಮೂರ್ತಿಗಳು ವಿವಿಧ ಭಂಗಿ ಮತ್ತು ಬಣ್ಣ ಹಾಗೂ ಶೈಲಿಯಿಂದ ಕೂಡಿರುತ್ತವೆ. ಆದ್ರೆ ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣದ ಗಣಪತಿ ಸೂಕ್ತ ಅನ್ನೋ ಮಾಹಿತಿ ಇಲ್ಲಿದೆ.

ಮಂಗಳ ಗ್ರಹ ಮೇಷ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಗ್ರಹವು ಕೆಂಪು ಬಣ್ಣವನ್ನು ಪ್ರತಿನಿಧಿಸೋದ್ರಿಂದ   ಮೇಷ ರಾಶಿಯ ಜನರು ಕೆಂಪು ಬಣ್ಣದ ಗಣೇಶನ ಪ್ರತಿಮೆಯನ್ನು ಸ್ಥಾಪಿಸಿ. ಇದು ಕೆಲಸದಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡುತ್ತೆ.

ವೃಷಭ ರಾಶಿಯ ಜನರು ತಿಳಿ ನೀಲಿ ಗಣಪತಿಯನ್ನು ಸ್ಥಾಪಿಸಬೇಕು. ಇದು ವ್ಯಕ್ತಿಗೆ ಜೀವನದ ಎಲ್ಲಾ ಸುಖವನ್ನು ನೀಡುತ್ತದೆ.

ಮಿಥುನ  ರಾಶಿ  ಜನರು ತಿಳಿ ಹಸಿರು ಗಣಪತಿಯನ್ನು ಸ್ಥಾಪಿಸಬೇಕು. ಇದು ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ನೀಡುತ್ತದೆ.

ಕಟಕ ರಾಶಿಯವರು ಬಿಳಿ ಬಣ್ಣದ ಗಣಪತಿಯನ್ನು ಮನೆಗೆ ತನ್ನಿ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಪಡೆಯಬಹುದು.

ಸೂರ್ಯ ಅಧಿಪತಿಯಾಗಿರುವ ಸಿಂಹ ರಾಶಿಯವರು ಸಿಂಧುರ ಬಣ್ಣದ ಗಣೇಶನ ವಿಗ್ರಹವನ್ನು ಸ್ಥಾಪಿಸಬೇಕು.

ಕನ್ಯಾರಾಶಿಯವರು ದಪ್ಪ ಹಸಿರು  ಬಣ್ಣದ ಗಣಪತಿಯ ಪ್ರತಿಮೆಯನ್ನು ಸ್ಥಾಪಿಸಬೇಕು. ಇದು ವ್ಯವಹಾರದಲ್ಲಿ ಹೆಚ್ಚಿನ ಲಾಭಕ್ಕೆ ಕಾರಣವಾಗುತ್ತದೆ.

ತುಲಾ ರಾಶಿ ಜನರು ಬಿಳಿ ಬಣ್ಣದ ಗಣಪತಿಯನ್ನು ಸ್ಥಾಪಿಸಬೇಕು. ದಾಂಪತ್ಯ ಸಂತೋಷಕ್ಕೆ ಇದು ಸಹಕಾರಿ.

ವೃಶ್ಚಿಕ  ರಾಶಿಯವರು  ದಪ್ಪ ಕೆಂಪು ಗಣೇಶ ವಿಗ್ರಹವನ್ನು ಮನೆಯಲ್ಲಿಟ್ಟರೆ  ಜೀವನದ ಎಲ್ಲಾ ತೊಂದರೆಗಳು ಕಡಿಮೆಯಾಗಿ ಸಮೃದ್ಧ ಜೀವನ ದೊರೆಯುತ್ತದೆ.

ಧನು ರಾಶಿ ಜನರು  ಹಳದಿ ಗಣಪತಿಯನ್ನು ಸ್ಥಾಪಿಸಬೇಕು.

ಮಕ ರರಾಶಿಯವರು  ತಿಳಿ ನೀಲಿ ಗಣಪತಿಯನ್ನು ಸ್ಥಾಪಿಸಬೇಕು.

ಕುಂಭ ರಾಶಿಯವರು ದಪ್ಪ ನೀಲಿ ಗಣೇಶವನ್ನು ಸ್ಥಾಪಿಸಿ

ಮೀನ ರಾಶಿಯವರು ದಪ್ಪ ಹಳದಿ ಗಣಪತಿಯನ್ನು ಸ್ಥಾಪಿಸಿದ್ರೆ ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...