alex Certify ರಾಜ್ ಕುಂದ್ರಾ ಪೋನೋಗ್ರಫಿ ಪ್ರಕರಣ; ಹೇಳಿಕೆ ನೀಡುವಾಗ ಕುಸಿದು ಬಿದ್ದ ಶಿಲ್ಪಾ ಶೆಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ ಕುಂದ್ರಾ ಪೋನೋಗ್ರಫಿ ಪ್ರಕರಣ; ಹೇಳಿಕೆ ನೀಡುವಾಗ ಕುಸಿದು ಬಿದ್ದ ಶಿಲ್ಪಾ ಶೆಟ್ಟಿ

ಬಹುಭಾಷಾ ತಾರೆ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ ಬಳಿಕ ಹಲವು ಬೆಳವಣಿಗೆ ನಡೆದಿವೆ.

ಶುಕ್ರವಾರ ಕ್ರೈಂ ಬ್ರಾಂಚ್ ತಂಡ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಒಡೆತನದ ಜುಹು ಬಂಗಲೆಯ ಮೇಲೆ ದಾಳಿ ನಡೆಸಿತು.

ಪೊಲೀಸ್ ಮೂಲಗಳ ಪ್ರಕಾರ ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೇಳಿಕೆಯನ್ನು ದಾಖಲಿಸಲಾಗಿದೆ. ಶೋಧ ನಡೆಸುವಾಗ ರಾಜ್ ಕುಂದ್ರಾ ಅವರನ್ನೂ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು.

ಕ್ರಿಕೆಟ್ ಪಂದ್ಯದ ವೇಳೆ ಮನದನ್ನೆಗೆ ಪ್ರಪೋಸ್ ಮಾಡಿದ ಪ್ರೇಮಿ

ಇದೇ ವೇಳೆ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಹೇಳಿಕೆಯನ್ನು ನೀಡುತ್ತಿರುವಾಗ ಶಿಲ್ಪಾ ಶೆಟ್ಟಿ ಕುಸಿದು ಬಿದ್ದಿದ್ದಾರೆ. ಸುಮಾರು ಎರಡು ಗಂಟೆ ವರೆಗೆ ದೀರ್ಘಾವಧಿಗೆ ಹೇಳಿಕೆಯನ್ನು ದಾಖಲಿಸಿದ್ದರಿಂದ ನಟಿ ಅಸಮಾಧಾನಗೊಂಡಿದ್ದಾರೆ ಎಂದೂ ಸಹ ವರದಿಯಾಗಿದೆ.

ತನ್ನ ಹೇಳಿಕೆಯಲ್ಲಿ ಶಿಲ್ಪಾ ಶೆಟ್ಟಿ, ಕಂಪನಿಯಲ್ಲಿ ತನ್ನ ಪಾಲ್ಗೊಳ್ಳುವಿಕೆ ನಿರಾಕರಿಸಿದ್ದಾರೆ, ವಿವಾದಾತ್ಮಕ ಅಪ್ಲಿಕೇಶನ್‌ನ ನಿಖರವಾದ ವಿಷಯದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಮುನ್ನ ಹೇಳಿಕೆ ನೀಡಿದ್ದ ಆಕೆ ಕಾಮಪ್ರಚೋದಕತೆ ಅಶ್ಲೀಲತೆಗಿಂತ ಭಿನ್ನವಾಗಿದೆ. ತನ್ನ ಪತಿಯ ಮೇಲೆ ವಿನಾಕಾರಣ ಆರೋಪ ಹೊರಿಸಲಾಗಿದೆ ಮತ್ತು ಪೋನೋಗ್ರಫಿ ತಯಾರಿಸುವಲ್ಲಿ ಭಾಗಿಯಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...