alex Certify ರಾಜ್ಯದ ಹಿಜಾಬ್​ ವಿವಾದದಲ್ಲಿ ಕಾಣದ ಕೈಗಳ ಕೈವಾಡ..? ಪಾಕ್​ನಿಂದಲೂ ವಿವಾದದ ಕಿಡಿ ಹೊತ್ತಿಸಲು ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಹಿಜಾಬ್​ ವಿವಾದದಲ್ಲಿ ಕಾಣದ ಕೈಗಳ ಕೈವಾಡ..? ಪಾಕ್​ನಿಂದಲೂ ವಿವಾದದ ಕಿಡಿ ಹೊತ್ತಿಸಲು ಯತ್ನ

ರಾಜ್ಯದಲ್ಲಿ ಹಿಜಾಬ್​ ಗದ್ದಲವು ತಾರಕಕ್ಕೇರಿರುವ ನಡುವೆಯೇ ಪಾಕಿಸ್ತಾನದ ಇಂಟರ್​​ -ಸರ್ವೀಸಸ್​ ಇಂಟೆಲಿಜೆನ್ಸ್​​ ದೇಶದಲ್ಲಿ ವಿವಾದವನ್ನು ಹೆಚ್ಚಿಸಲು ಯತ್ನಿಸುತ್ತಿದೆ ಎಂಬ ಮಾಹಿತಿ ಆಂತರಿಕ ಮೂಲಗಳಿಂದ ತಿಳಿದುಬಂದಿದೆ.

ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್​ ಫಾರ್​ ಜಸ್ಟೀಸ್​​ ಮೂಲಕ ಈ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿಯಲು ಪಾಕ್​ ಮುಂದಾಗಿದೆ ಎನ್ನಲಾಗಿದೆ.

ಐಎಸ್​ಐ ದೇಶದಲ್ಲಿ ಹಿಜಾಬ್​ ಜನಾಭಿಪ್ರಾಯ ಸಂಗ್ರಹಣೆಯ ಪರಿಕಲ್ಪನೆಯನ್ನು ಮುಂದಿಡುತ್ತಿದೆ ಎಂಬುದು ತಿಳಿದುಬಂದಿದೆ.

ಭಯೋತ್ಪಾದಕ ಗುಂಪಾದ ಎಸ್​ಎಫ್​ಜೆ ಮೂಲಕ ಐಎಸ್​ಐ ನಡೆಸುತ್ತಿರುವ ಹಿಜಾಬ್​​ ರೆಫ್ರೆಂಡಮ್ ಮೇಲೆ ಕಣ್ಣಿಡುವಂತೆ ಗುಪ್ತಚರ ಇಲಾಖೆಯು ಪೊಲೀಸ್​ ಇಲಾಖೆ ಹಾಗೂ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ನೀಡಿದೆ.

ಭಾರತ ವಿರೋಧಿ ಮನಸ್ಥಿತಿಗಳು ಸಿಖ್ಸ್​ ಫಾರ್​ ಜಸ್ಟೀಸ್​ ಗುರುಪತ್ವಾನ್ರ್​​ ಸಿಂಗ್​ ಪನ್ನು ಜೊತೆಯಲ್ಲಿ ಸೇರಿ ಹಿಜಾಬ್​ ಜನಾಭಿಪ್ರಾಯ ಸಂಗ್ರಹಣೆಯನ್ನು ಮಾಡುವ ಮೂಲಕ ಉರ್ದುಸ್ತಾನ್​ ಎಂಬ ಪರಿಕಲ್ಪನೆಯನ್ನು ವಿಜೃಂಭಿಸಬಹುದು ಎಂದು ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...