
ಇದಾದ ಕೂಡಲೇ ಅರಣ್ಯ ಇಲಾಖೆಯ ವಿಭಾಗೀಯ ಸಿಬ್ಬಂದಿ ಚಿರತೆ ಶೋಧಿಸಲು ಜಾಲ ಹೆಣೆದಿದ್ದಾರೆ. ಇದಾದ ಎರಡು ದಿನಗಳ ಬಳಿಕವೂ ಚಿರತೆಯ ಹೆಜ್ಜೆ ಗುರುತು ಸಿಗದೇ ಇರುವ ಕಾರಣ ಪ್ರಾಣಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಕಳ್ಳಸಾಗಣೆ ಮಾಡಲಾಗುತ್ತಿದ್ದ ಬರೋಬ್ಬರಿ 42 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ
ದೊಡ್ಡ ಬೆಕ್ಕು ಇನ್ನೂ ಹೊರಗೆ ಅಡ್ಡಾಡುತ್ತಿದೆ ಎಂದು ಅನೇಕರು ನಂಬಿದ್ದು, ಭಯದಲ್ಲಿದ್ದಾರೆ. ಈ ಕಾರಣದಿಂದಾಗಿ ಪ್ರದೇಶದ ನಿವಾಸಿಗಳು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಖಾಸಗಿ ಗಾರ್ಡ್‌ಗಳನ್ನು ಚಿರತೆ ಮೇಲೆ ಕಣ್ಣಿಡಲು ಸೂಚಿಸಲಾಗಿದೆ.
ರಸ್ತೆಗಳೆಲ್ಲಾ ಕಾಂಕ್ರೀಟ್ ಮಯವಾಗಿರುವ ಕಾರಣ ಚಿರತೆಯ ಹೆಜ್ಜೆ ಗುರುತುಗಳು ಎಲ್ಲೂ ಕಾಣಸಿಕ್ಕಿಲ್ಲ. ಈ ಕಾರಣದಿಂದಾಗಿ ಚಿರತೆಯ ಶೋಧ ಇನ್ನಷ್ಟು ಕಷ್ಟವಾಗಿದೆ.
ಇದೇ ವೇಳೆ, ರಾತ್ರಿ ವೇಳೆ ಹೊರಗೆ ಬರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಸೂಚನೆಗಳನ್ನು ಇಲ್ಲಿನ ನಿವಾಸಿಗಳಿಗೆ ಅರಣ್ಯ ಇಲಾಖೆ ನೀಡಿದೆ.