alex Certify ರಷ್ಯಾದ ಫಿರಂಗಿ ದಾಳಿಯಲ್ಲಿ ಉಕ್ರೇನ್​ನ ಕ್ಯಾನ್ಸರ್​ ಆಸ್ಪತ್ರೆಗೆ ಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದ ಫಿರಂಗಿ ದಾಳಿಯಲ್ಲಿ ಉಕ್ರೇನ್​ನ ಕ್ಯಾನ್ಸರ್​ ಆಸ್ಪತ್ರೆಗೆ ಹಾನಿ

ರಷ್ಯಾವು ದೊಡ್ಡ ಮಟ್ಟದಲ್ಲಿ ಫಿರಂಗಿ ದಾಳಿ ನಡೆಸಿದ ಪರಿಣಾಮ ದಕ್ಷಿಣ ನಗರವಾದ ಮೈಕೋಲೈವ್​ನಲ್ಲಿ ಕ್ಯಾನ್ಸರ್​ ಆಸ್ಪತ್ರೆ ಸೇರಿದಂತೆ ಹಲವಾರು ವಸತಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದು ಉಕ್ರೇನ್​ನ ಅಧಿಕಾರಿಗಳು ಆರೋಪಿಸಿದ್ದಾರೆ.

ಆಸ್ಪತ್ರೆಯ ಮುಖ್ಯ ವೈದ್ಯ ಮ್ಯಾಕ್ಸಿಮ್​​ ಬೆಜ್ನೆಸೆಂಕೋ ಈ ವಿಚಾರವಾಗಿ ಮಾತನಾಡಿದ್ದು ದಾಳಿಯ ಸಮಯದಲ್ಲಿ ನೂರಾರು ರೋಗಿಗಳು ಆಸ್ಪತ್ರೆಯಲ್ಲಿದ್ದರು. ಆದರೆ ಅದೃಷ್ಟವಶಾತ್​ ದಾಳಿಯಿಂದಾಗಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಕಟ್ಟಡಕ್ಕೆ ಹಾನಿಯುಂಟಾಗಿದೆ ಹಾಗೂ ಕಿಟಕಿಗಳು ಸ್ಫೋಟಗೊಂಡಿವೆ ಎಂದು ಹೇಳಿದರು.

ರಷ್ಯಾದ ಪಡೆಗಳು ನಗರವನ್ನು ಸುತ್ತುವರಿಯುವ ಪ್ರಯತ್ನದಲ್ಲಿ ಕೈವ್‌ನ ದಕ್ಷಿಣಕ್ಕೆ 470 ಕಿಲೋಮೀಟರ್ ಇರುವ ಮೈಕೊಲೈವ್‌ನಲ್ಲಿ ತಮ್ಮ ದಾಳಿಯನ್ನು ಹೆಚ್ಚಿಸಿವೆ.

ಉಕ್ರೇನ್​ನ ಅಧಿಕಾರಿಗಳು ಬುಧವಾರದಂದು ದಕ್ಷಿಣ ನಗರವಾದ ಮಾರಿಯುಪೋಲ್​ನಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ರಷ್ಯಾ ಶೆಲ್​ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...