alex Certify ರಶ್ಮಿಕಾ ನಟನೆಯ ಸಿನಿಮಾಗೆ ಸಂಕಷ್ಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಶ್ಮಿಕಾ ನಟನೆಯ ಸಿನಿಮಾಗೆ ಸಂಕಷ್ಟ….!

ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಯಾವುದೋ ಒಂದು ಸ್ಟೇಟ್ಮೆಂಟ್ ನಿಂದ ಟೀಕೆಗೆ ಗುರಿಯಾಗಿದ್ದ ಈ ನಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇವರ ನಟನೆಯ ವಾರಿಸು ಸಿನಿಮಾಗೆ ನೋಟೀಸ್ ಜಾರಿ ಆಗಿದೆ.

ಹೌದು, ವಾರಿಸು ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಇದೀಗ ಸಿನಿಮಾಗೆ ನೋಟೀಸ್ ಜಾರಿ ಮಾಡಲಾಗಿದೆ. ಅನುಮತಿ ಇಲ್ಲದೇ ಪ್ರಾಣಿಗಳನ್ನು ಈ ಸಿನಿಮಾದಲ್ಲಿ ಬಳಸಲಾಗಿದೆ ಎಂದು ಪ್ರಾಣಿ ದಯಾ ಸಂಘ ನೋಟೀಸ್ ನೀಡಿದೆ. ಅಧಿಕಾರಿಗಳ ಅನುಮತಿ ಇಲ್ಲದೆ ಸಿನಿಮಾ ತಂಡ ಚಿತ್ರೀಕರಣದಲ್ಲಿ ಆನೆಗಳನ್ನು ಬಳಸಿಕೊಂಡಿದ್ದಾರಂತೆ.

ಹೀಗಾಗಿ ಏಳು ದಿನಗಳ ಒಳಗೆ ಸರಿಯಾದ ವಿವರಣೆ ನೀಡುವಂತೆ ಪ್ರಾಣಿ ದಯಾ ಸಂಘ ನೋಟೀಸ್ ಜಾರಿ ಮಾಡಿದೆ. ವಿವರಣೆ ಬರದೇ ಹೋದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...