alex Certify ರವಿದಾಸ್​ ಜಯಂತಿ ಪ್ರಯುಕ್ತ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರವಿದಾಸ್​ ಜಯಂತಿ ಪ್ರಯುಕ್ತ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ

ರವಿದಾಸ್​ ಜಯಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮುಂಜಾನೆ ದೆಹಲಿಯ ಕರೋಲ್​ಬಾಗ್​ನಲ್ಲಿರುವ ರವಿದಾಸ್​ ದೇವಾಲಯಕ್ಕೆ ಭೇಟಿ ನೀಡಿದರು. ದೇವಸ್ಥಾನದಲ್ಲಿ ದರ್ಶನ ಪಡೆದ ಪ್ರಧಾನಿ ಮೋದಿ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಇದಾದ ಬಳಿಕ ಭಕ್ತರೊಂದಿಗೆ ಕೀರ್ತನೆಯಲ್ಲಿ ಪಾಲ್ಗೊಂಡ ಮೋದಿ ಮಂಜೀರಾವನ್ನು ನುಡಿಸಿದ್ದಾರೆ. ಪ್ರಧಾನಿ ಮೋದಿ ಕೀರ್ತನೆಯಲ್ಲಿ ಭಾಗಿಯಾಗಿರುವ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಸಂತ ರವಿದಾಸ್​ ಜಯಂತಿಯ ಪ್ರಯುಕ್ತ ದೆಹಲಿಯ ಕರೋಲ್​ಬಾಗ್​ನಲ್ಲಿರುವ ಶ್ರೀ ಗುರು ರವಿದಾಸ್​ ವಿಶ್ರಾಮ ಧಾಮ ದೇಗುಲದಲ್ಲಿ ಪ್ರಧಾನಿ ಮೋದಿ ಭಕ್ತರೊಂದಿಗೆ ಭಜನೆಯಲ್ಲಿ ಭಾಗಿಯಾದರು ಎಂದು ಸುದ್ದಿಸಂಸ್ಥೆ ಎಎನ್​ಐ ವರದಿ ಮಾಡಿದೆ.

ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ಮತಗಳನ್ನು ಸೆಳೆಯಲು ಇನ್ನಿಲ್ಲದ ಹರಸಾಹಸವನ್ನು ಮಾಡುತ್ತಿವೆ. ಇದೇ ಕಾರಣಕ್ಕೆ ರವಿದಾಸ ಜಯಂತಿಯ ಪ್ರಯುಕ್ತ ರಾಜಕೀಯ ನಾಯಕರು ರವಿದಾಸ ವಿಶ್ರಾಮ ಧಾಮದತ್ತ ತೆರಳುತ್ತಿದ್ದಾರೆ.

— ANI (@ANI) February 16, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...