alex Certify ಯೋಧನ ಕಾಲಿಗೆರಗಿ ನಮಸ್ಕರಿಸಿದ ಪುಟ್ಟ ಬಾಲಕಿ: ಹೃದಯಸ್ಪರ್ಶಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಧನ ಕಾಲಿಗೆರಗಿ ನಮಸ್ಕರಿಸಿದ ಪುಟ್ಟ ಬಾಲಕಿ: ಹೃದಯಸ್ಪರ್ಶಿ ವಿಡಿಯೋ ವೈರಲ್​

ನಮ್ಮ ದೇಶವನ್ನು ಕಾಯುತ್ತಿರುವ ಭಾರತೀಯ ಯೋಧರಿಗೆ ನಾವು ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ ಪುಟ್ಟ ಬಾಲಕಿಯೊಬ್ಬಳು ಯೋಧನ ಕಾಲಿಗೆ ನಮಸ್ಕರಿಸಿದ್ದು ಈ ವಿಡಿಯೋ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದದೆ.

ರಾಜಕಾರಣಿ ಪಿ.ಸಿ ಮೋಹನ್​ ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದ ಯೋಧರ ಬಳಿಗೆ ಪುಟ್ಟ ಬಾಲಕಿಯೊಬ್ಬಳು ಬರುತ್ತಾಳೆ. ಇವರಲ್ಲಿ ಓರ್ವ ಯೋಧ ಬಾಗಿ ಬಾಲಕಿಯ ಕೆನ್ನೆಯನ್ನು ಹಿಂಡುತ್ತಾರೆ. ಕೂಡಲೇ ಬಾಲಕಿಯು ಆ ಯೋಧನ ಕಾಲಿಗೆರಗಿ ನಮಸ್ಕಾರ ಮಾಡಿದ್ದಾಳೆ.

ದೇಶದ ಎಲ್ಲಾ ಪೋಷಕರೂ ಮಕ್ಕಳಿಗೆ ಈ ರೀತಿಯಲ್ಲಿ ದೇಶಪ್ರೇಮವನ್ನು ಕಲಿಸಬೇಕು ಎಂದು ಪಿ ಸಿ ಮೋಹನ್​ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.

— P C Mohan (@PCMohanMP) July 15, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...