alex Certify ಯುವಕನ ಹತ್ಯೆಯನ್ನು ಪ್ರಿಯಕರನಿಗೆ ಲೈವ್ ಆಗಿ ತೋರಿಸಿದ ವಿವಾಹಿತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನ ಹತ್ಯೆಯನ್ನು ಪ್ರಿಯಕರನಿಗೆ ಲೈವ್ ಆಗಿ ತೋರಿಸಿದ ವಿವಾಹಿತೆ….!

ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತೆಯೊಬ್ಬಳು ತನ್ನ ಸಹಚರರೊಂದಿಗೆ ಸೇರಿ ಯುವಕನೊಬ್ಬನ ಹತ್ಯೆ ಮಾಡಿಸಿ ಅದನ್ನು ತನ್ನ ಪ್ರಿಯಕರನಿಗೆ ಲೈವ್ ವಿಡಿಯೋ ಮೂಲಕ ತೋರಿಸಿರುವ ಆಘಾತಕಾರಿ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಘಟನೆಯ ವಿವರ: ಜೂನ್ 24ರಂದು ಕಲಬುರಗಿ ಜಿಲ್ಲೆ ಅಳಂದ ತಾಲ್ಲೂಕಿನ ಶುಕ್ರವಾಡಿ ಗ್ರಾಮದ ದಯಾನಂದ ಲಾಡಂತಿ ಎಂಬ ಯುವಕನ ಹತ್ಯೆಯಾಗಿತ್ತು. ಈತ ಇತ್ತೀಚೆಗಷ್ಟೇ ದುಬೈನಿಂದ ಬಂದಿದ್ದನೆನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

ಈ ವೇಳೆ ಕಲಬುರಗಿಯ ಬಸವೇಶ್ವರ ಕಾಲೋನಿಯ ಅಂಬಿಕಾ ಎಂಬಾಕೆ ದಯಾನಂದನನ್ನು ಕರೆ ಮಾಡಿ ಕರೆಸಿಕೊಂಡಿದ್ದು ಬೆಳಕಿಗೆ ಬಂದಿತ್ತು. ಹೆಚ್ಚಿನ ವಿಚಾರಣೆ ನಡೆಸಿದಾಗ ಆಕೆ ತನ್ನ ಸಹಚರರಾದ ಕೃಷ್ಣ, ನೀಲಕಂಠ, ಸುರೇಶ್ ಮತ್ತು ಸಂತೋಷ್ ಎಂಬಾತನ ಜೊತೆ ಸೇರಿ ಕೊಲೆ ಮಾಡಿರುವುದು ಬಯಲಾಯಿತು.

ಈಗಾಗಲೇ ವಿವಾಹವಾಗಿದ್ದ ಅಂಬಿಕಾ, ದಯಾನಂದನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದರ ಜೊತೆಗೆ ದಯಾನಂದನ ಸಂಬಂಧಿ ಸಿಆರ್ಪಿಎಫ್ ಯೋಧ ಅನಿಲ್ ಎಂಬಾತನ ಪ್ರೀತಿಯಲ್ಲೂ ಬಿದ್ದಿದ್ದಳು.

ದಯಾನಂದ, ಅನಿಲ್ ಪತ್ನಿಯ ಜೊತೆಗೂ ಆಕ್ರಮ ಸಂಬಂಧ ಇಟ್ಟುಕೊಂಡಿದ್ದು ಇದರಿಂದ ಆಕ್ರೋಶಗೊಂಡಿದ್ದ ಅನಿಲ್ ತನ್ನ ಪ್ರೇಯಸಿ ಅಂಬಿಕಾಗೆ ಮೂರು ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದಾನೆ. ಅದರಂತೆ ದಯಾನಂದನ ಹತ್ಯೆ ಮಾಡಿಸಿದ ಆಕೆ ಇದನ್ನು ಲೈವ್ ವಿಡಿಯೋ ಮೂಲಕ ಅನಿಲ್ ಗೆ ತೋರಿಸಿದ್ದ ಸಂಗತಿ ಬಹಿರಂಗವಾಗಿದೆ. ಆರೋಪಿಗಳೆಲ್ಲರನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...