alex Certify ಯುಪಿ ಚುನಾವಣೆ ನಡುವೆಯೇ ಬಿಜೆಪಿ ಕಾರ್ಯಕರ್ತರಿಂದ ಗೂಂಡಾಗಿರಿ…..? ಬಯಲಾಯ್ತು ವೈರಲ್​ ವಿಡಿಯೋ ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಪಿ ಚುನಾವಣೆ ನಡುವೆಯೇ ಬಿಜೆಪಿ ಕಾರ್ಯಕರ್ತರಿಂದ ಗೂಂಡಾಗಿರಿ…..? ಬಯಲಾಯ್ತು ವೈರಲ್​ ವಿಡಿಯೋ ಅಸಲಿಯತ್ತು

ಹಾಡಹಗಲೇ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ಕ್ರೌರ್ಯ ಮೆರೆಯುತ್ತಿರೋದನ್ನು ಕಾಣಬಹುದಾಗಿದೆ. ಪಂಚರಾಜ್ಯ ವಿಧಾನಸಭಾ ಚುನಾವಣೆಯ ನಡುವೆಯೇ ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಎಂಬ ವದಂತಿಯು ಟ್ವಿಟರ್​ನಲ್ಲಿ ಹರಿದಾಡುತ್ತಿದೆ.

ಆದರೆ ಫ್ಯಾಕ್ಟ್​ ಚೆಕ್​ನಲ್ಲಿ ಇದೊಂದು ಸುಳ್ಳು ಮಾಹಿತಿ ಎಂದು ತಿಳಿದುಬಂದಿದೆ. ಈ ವಿಡಿಯೋವನ್ನು ತೆಲಂಗಾಣದ ಜಂಗಾವ್​ ಜಿಲ್ಲೆಯಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ಆಡಳಿತಾರೂಢ ಟಿಆರ್​ಎಸ್​ ಕಾರ್ಯಕರ್ತರ ಜೊತೆಯಲ್ಲಿ ಜಟಾಪಟಿ ನಡೆಸಿದ್ದಾರೆ. ಈ ವಿಡಿಯೋಗೂ ಪ್ರಸ್ತುತ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂಬ ವಿಚಾರ ಫ್ಯಾಕ್ಟ್​ ಚೆಕ್​ನಲ್ಲಿ ಹೊರಬಿದ್ದಿದೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ನಡುವೆಯೇ ಬಿಜೆಪಿ ಕಾರ್ಯಕರ್ತರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ ಎನ್ನಲಾದ ವಿಡಿಯೋ ಟ್ವಿಟರ್​ನಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಕಡೆಯಲ್ಲಿ ಜಂಗಾವ್​ ಟ್ರಾಫಿಕ್​ ಪೊಲೀಸ್​ ಎಂದು ಬರೆದಿರೋದು ಕಾಣುತ್ತಿದೆ ಎಂದು ಎಎಫ್​ಡಬ್ಲು ಹೇಳಿದೆ.

ಜಂಗಾವ್​ ತೆಲಂಗಾಣದಲ್ಲಿರುವ ಒಂದು ಜಿಲ್ಲೆಯಾಗಿದೆ. ಇದು ಹೈದರಾಬಾದ್​ನಿಂದ 85 ಕಿಲೋಮೀಟರ್​ ದೂರದಲ್ಲಿದೆ. ಬಿಜೆಪಿಯ ಬೆನ್ನಟ್ಟಿ ಹೋಗುತ್ತಿರುವ ಕಾರ್ಯಕರ್ತರು ಗುಲಾಬಿ ಶಾಲು ಧರಿಸಿದ್ದಾರೆ. ತೆಲಂಗಾಣದ ಆಡಳಿತ ಪಕ್ಷ ಟಿಆರ್​ಎಸ್​ನ ಬಣ್ಣ ಗುಲಾಬಿ. ಅಲ್ಲದೇ ವಿಡಿಯೋದಲ್ಲಿ ಕಾಣುತ್ತಿರುವ ಅಂಗಡಿಗಳಲ್ಲಿ ಇಂಗ್ಲೀಷ್​ ಹೊರತುಪಡಿಸಿ ತೆಲಗು ಭಾಷೆಯಲ್ಲಿ ಬೋರ್ಡ್ ಹಾಕಿರುವುದನ್ನು ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...