alex Certify ಯುಪಿಐ ಪಾವತಿ ವೇಳೆಯೂ ಆಗಬಹುದು ಮೋಸ..! ಇದಕ್ಕಾಗಿ ನೆನಪಿನಲ್ಲಿಡಿ ಈ ಮುಖ್ಯ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಪಿಐ ಪಾವತಿ ವೇಳೆಯೂ ಆಗಬಹುದು ಮೋಸ..! ಇದಕ್ಕಾಗಿ ನೆನಪಿನಲ್ಲಿಡಿ ಈ ಮುಖ್ಯ ಅಂಶ

UPI Payment : UPI पेमेंट में भी होता है फ्रॉड का खतरा, अपने ट्रांजैक्शन को ऐसे रख सकते हैं सेफಕಳೆದ ಕೆಲ ವರ್ಷಗಳಲ್ಲಿ ಡಿಜಿಟಲ್​ ಪಾವತಿ ಪ್ರಕ್ರಿಯೆಯನ್ನು ಬಳಕೆ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಸ್ಮಾರ್ಟ್​ಫೋನ್​ಗಳ ಸಹಾಯದಿಂದ ಯುಪಿಐ ಪೇಮೆಂಟ್​ ಮಾಡೋದು ಇದೀಗ ಅತ್ಯಂತ ಸುಲಭದ ಕೆಲಸವಾಗಿದೆ. ಯುಪಿಐ ಆರ್.​ಬಿ.ಐ.ನಿಂದ ನಿಯಂತ್ರಿಸಲ್ಪಡೋದರಿಂದ ಈ ಪಾವತಿ ಪ್ರಕ್ರಿಯೆಯನ್ನು ಎಲ್ಲರೂ ನಂಬುತ್ತಾರೆ. ಹೀಗಾಗಿ ಯುಪಿಐ ಮೂಲಕ ಹೆಚ್ಚೆಚ್ಚು ಪಾವತಿ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ.

ಆದರೆ ನಾವು ಯುಪಿಐ ಪಾವತಿ ವೇಳೆಯಲ್ಲಿಯೂ ಜಾಗರೂಕರಾಗಿ ಇರುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಇಲ್ಲಿ ಕೂಡ ನಿಮಗೆ ವಂಚನೆಯಾಗುವ ಸಾಧ್ಯತೆ ಇದೆ. ಡಿಜಿಟಲ್​ ಪಾವತಿ ಪ್ರಕ್ರಿಯೆ ಬಳಕೆ ಹೆಚ್ಚಾದಂತೆಲ್ಲ ಸೈಬರ್​ ಕಳ್ಳರು ನಿಮ್ಮ ಹಣವನ್ನು ದೋಚಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹೀಗಾಗಿ ನೀವು ಯುಪಿಐ ಪಾವತಿ ವೇಳೆಯಲ್ಲಿಯೂ ಜಾಗರೂಕರಾಗಿ ಇರಬೇಕು.

ಯುಪಿಐ ಪಾವತಿಗಳಲ್ಲಿ ನಿಮ್ಮ ಮೊಬೈಲ್​ ಫೋನ್​ ವರ್ಚುವಲ್​ ವಾಲೆಟ್​ ಆಗಿ ಕಾರ್ಯನಿರ್ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ನೀವು ಸುಲಭವಾಗಿ ಹಣಕಾಸಿನ ವಂಚನೆಗೆ ಗುರಿಯಾಗುತ್ತೀರಿ. ಹೀಗಾಗಿ ನೀವು ಹಣಕಾಸು ಸಂಬಂಧಿತ ಆ್ಯಪ್​ಗಳನ್ನು ಬಳಸುವ ವೇಳೆಯಲ್ಲಿ ಜಾಗರೂಕರಾಗಿ ಇರಬೇಕು. ಹಾಗಾದರೆ ಯಾವೆಲ್ಲ ರೀತಿಯಲ್ಲಿ ನೀವು ಎಚ್ಚರ ವಹಿಸಬೇಕು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ :

1. ನೀವು ಯಾರಿಗಾದರೂ ಯುಪಿಐ ಮೂಲಕ ಹಣ ಪಾವತಿ ಮಾಡುವವರಾಗಿದ್ದರೆ ನೀವು ಮೊಬೈಲ್​ ಸಂಖ್ಯೆ ಇಲ್ಲವೇ ಯುಪಿಐ ಅಡ್ರೆಸ್​ ಮಾತ್ರ ಹಂಚಿಕೊಳ್ಳಿ. ಇದನ್ನು ಹೊರತುಪಡಿಸಿ ನಿಮ್ಮ ಯುಪಿಐ ಅಪ್ಲಿಕೇಶನ್​ ಪ್ರವೇಶಿಸಲು ಯಾರಿಗೂ ಅವಕಾಶ ನೀಡಬೇಡಿ. ಎಂದಿಗೂ ನಿಮ್ಮ ಫೋನ್​ ಸ್ಕ್ರೀನ್​ ಲಾಕ್​, ಪಾಸ್​ವರ್ಡ್​ ಅಥವಾ ಯುಪಿಐ ಪಿನ್​​ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

2. ಸ್ಕ್ರೀನ್​ ಶೇರ್​ ಮಾಡುವಂತಹ ಅಪ್ಲಿಕೇಶನ್​ಗಳಿಗೆ ಯುಪಿಐ ಅಪ್ಲಿಕೇಶನ್​ ಪ್ರವೇಶಿಸಲು ಎಂದಿಗೂ ಅನುಮತಿ ನೀಡಬೇಡಿ. ಇಂತಹ ಅಪ್ಲಿಕೇಶನ್​ಗಳು ನಿಮ್ಮ ಡೇಟಾಗಳನ್ನು ಸೋರಿಕೆ ಮಾಡುತ್ತವೆ ಎಂಬುದು ನೆನಪಿನಲ್ಲಿರಲಿ. ನಿಮ್ಮ ಪಾಸ್​ವರ್ಡ್​ ಹಾಗೂ ಒಟಿಪಿಗಳನ್ನು ಕದ್ದು ನೋಡುವಂತಹ ಸಾಮರ್ಥ್ಯ ಇಂತಹ ಅಪ್ಲಿಕೇಶನ್​ಗಳಿಗೆ ಇರುತ್ತದೆ. ಸೆಟ್ಟಿಂಗ್​​ಗೆ ಹೋಗಿ ಇಂತಹ ಅಪ್ಲಿಕೇಶನ್​ಗಳಿಗೆ ಯುಪಿಐ ಅಪ್ಲಿಕೇಶನ್​ ವೀಕ್ಷಿಸುವ ಅನುಮತಿಯನ್ನು ಆಫ್​ ಮಾಡಿ.

3. ಯುಪಿಐ ಮೂಲಕ ಯಾರಿಗಾದರೂ ಹಣ ಪಾವತಿ ಮಾಡುವ ಮುನ್ನ ಅವರ ವಿವರವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ. ಯುಪಿಐ ಅಪ್ಲಿಕೇಶನ್​ ಕ್ಯೂಆರ್​ ಕೋಡ್​​ ಸ್ಕ್ಯಾನ್​ ಮಾಡಿದ ತಕ್ಷಣ ಅಲ್ಲಿ ಕಾಣುವ ನೋಂದಾಯಿತ ಹೆಸರನ್ನು ಮೊದಲು ಪರಿಶೀಲನೆ ಮಾಡಿ. ಏಕೆಂದರೆ ನೀವು ಪಾವತಿ ಮಾಡಿದ ಹಣ ತಪ್ಪಿ ಬೇರೆಯವರಿಗೆ ಹೋದರೆ ನಿಮಗೆ ಮರಳಿ ಸಿಗೋದಿಲ್ಲ.

4. ಲಿಂಕ್​ಗಳು ಅಥವಾ ವಂಚಕ ಕರೆಗಳ ಬಗ್ಗೆ ಎಚ್ಚರಿಕೆ ಇರಲಿ. ಸೈಬರ್​ ಕಳ್ಳರು ನಿಮ್ಮ ಯುಪಿಐ ಮಾಹಿತಿ ತಿಳಿದುಕೊಳ್ಳಲು ನಿಮಗೆ ಇನ್ಯಾವುದೋ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿ ಎಂದು ಹೇಳಬಹುದು. ಆದರೆ ಇಂತಹ ಅಪ್ಲಿಕೇಶನ್​ಗಳು ಅಥವಾ ಲಿಂಕ್​ಗಳನ್ನು ಎಂದಿಗೂ ಓಪನ್​ ಮಾಡಬೇಡಿ.

5.ನೀವು ಎಲ್ಲೋ ದೂರ ಇರುವ ವ್ಯಕ್ತಿಗೆ ಹಣ ಕಳುಹಿಸುವ ಮುನ್ನ ಮೊಬೈಲ್​ ನಂಬರ್​ ಕೇಳುವುದಕ್ಕಿಂತ ಅವರ ಯುಪಿಐ ಐಡಿಯನ್ನು ಕೇಳುವುದು ಉತ್ತಮ. ಏಕೆಂದರೆ ಮೊಬೈಲ್​ ಸಂಖ್ಯೆ ನಮೂದಿಸುವಾಗ ಕೊಂಚ ಏರುಪೇರಾದರೂ ಸಹ ಹಣ ಇನ್ನೊಬ್ಬರ ಪಾಲಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ದೊಡ್ಡ ಮೊತ್ತದ ಹಣ ಪಾವತಿ ಮಾಡುವಾಗ ಯುಪಿಐ ಐಡಿ ಬಳಕೆ ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...