alex Certify ಮೋದಿ ಫೋಬಿಯಾದಿಂದ ರಾಹುಲ್ ಬಳಲುತ್ತಿದ್ದಾರೆ; ಅಮಿತ್ ಶಾ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಫೋಬಿಯಾದಿಂದ ರಾಹುಲ್ ಬಳಲುತ್ತಿದ್ದಾರೆ; ಅಮಿತ್ ಶಾ ಹೇಳಿಕೆ

ಪಣಜಿ : ಗೋವಾ ರಾಜ್ಯದಲ್ಲಿ ಚುನಾವಣಾ ಪ್ರಚಾರ ರಂಗು ಪಡೆದಿದ್ದು, ಅಮಿತ್ ಶಾ ಭರ್ಜರಿ ಪ್ರದರ್ಶನ ಕೈಗೊಂಡಿ

ಗೋವಾ ರಾಜ್ಯದಲ್ಲಿ ಒಂದು ದಿನದ ಪ್ರಚಾರಕ್ಕಾಗಿ ಆಗಮಿಸಿದ ಅಮಿತ್ ಶಾ, ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ರಾಹುಲ್ ಗಾಂಧಿ ಅವರು ಮೋದಿ- ಫೋಬಿಯಾದಿಂದ ಬಳಲುತ್ತಿದ್ದಾರೆ. ಗೋವಾದಲ್ಲಿ ಬೇರೆ ರಾಜ್ಯಗಳ ಪಕ್ಷಗಳಿಗೆ ಅವಕಾಶವಿಲ್ಲ. ಆದರೆ ಇಲ್ಲಿ ಬಿಜೆಪಿಗೆ ಮಾತ್ರ ಸರ್ಕಾರ ರಚಿಸಲು ಅವಕಾಶ ಸಿಗಲಿದೆ. ಗೋವಾದ ಬಜೆಟ್ ನ್ನು 432 ಕೋಟಿ ರೂ. ಗಳಿಂದ 2,567 ಕೋಟಿಗೆ ಏರಿಸಿದ್ದು ಬಿಜೆಪಿಯೇ ಹೊರತು, ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳಲ್ಲ. ಇಂತಹ ದೊಡ್ಡ ಅಭಿವೃದ್ಧಿ ಕಾರ್ಯಗಳು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಪೊಂಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ 17 ಜನರು ಗೆಲುವು ಸಾಧಿಸಿದ್ದರು. ಈ ಬಾರಿ 40 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನ ನಡುವೆ ಈ ಬಾರಿಯೂ ಗೋವಾದಲ್ಲಿ ಪೈಪೋಟಿ ಕಂಡು ಬರುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...