alex Certify ಮೊಬೈಲ್ ಗೀಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಬಳಕೆದಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಗೀಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಬಳಕೆದಾರ

ನಮ್ಮಲ್ಲಿ ಬಹುತೇಕ ಮಂದಿ ಮೊಬೈಲ್ ಚಟಕ್ಕೆ ಒಳಗಾಗಿದ್ದಾರೆ. ಎಷ್ಟೇ ಬ್ಯುಸಿ ಕೆಲಸವಿದ್ದರೂ ಒಮ್ಮೆ ಮೊಬೈಲ್ ತೆರೆದು ಇನ್ಸ್ಟಾಗ್ರಾಂ ಸ್ಕ್ರಾಲ್ ಮಾಡ್ಲಿಲ್ಲ ಅಂದ್ರೆ ಮನಸ್ಸಿಗೆ ಸಮಾಧಾನನೇ ಇರೋದಿಲ್ಲ ಅನ್ನೋ ಹಾಗಾಗಿದೆ. ಹೆಚ್ಚಿನವರು ಎದ್ದ ತಕ್ಷಣ ತಮ್ಮ ಫೋನ್‌ಗಳನ್ನು ಪರಿಶೀಲಿಸುವುದು ಅಥವಾ ಮಲಗುವ ಮುನ್ನ ತಮ್ಮ ಸಾಮಾಜಿಕ ಮಾಧ್ಯಮ ಫೀಡ್‌ಗಳನ್ನು ಸ್ಕ್ರೋಲ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಇದೀಗ ಇನ್ಸ್ಟಾಗ್ರಾಂ ಪ್ರಭಾವಶಾಲಿ ತನ್ನ ಕಾಮಿಕ್ ನೊಂದಿಗೆ ಈ ಚಟವನ್ನು ಸಂಪೂರ್ಣವಾಗಿ ಸಂಕ್ಷಿಪ್ತಗೊಳಿಸಿದ್ದಾರೆ. ಡಿಜಿಟಲ್ ನಶಾ ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಯುವರಾಜ್ ದುವಾ, ಯಾವುದೇ ವಸ್ತುವನ್ನು ತೆಗೆದುಕೊಳ್ಳದೆಯೇ ನಾವೆಲ್ಲರೂ ನಮ್ಮ ಫೋನ್‌ಗಳಿಗೆ ಹೇಗೆ ಅಡಿಕ್ಟ್ ಆಗಿದ್ದೇವೆ ಎಂಬುದನ್ನು ಉಲ್ಲಾಸದಿಂದ ವಿವರಿಸಿದ್ದಾರೆ.

ಶೀತ ಕೆಮ್ಮುಗಳ ಪರಿಹಾರಕ್ಕೆ ದಿನ ನಿತ್ಯ ಬಳಸಿ ‘ತುಳಸಿ’

ನಾವು ಪ್ರತಿ ಐದು ನಿಮಿಷಗಳಿಗೊಮ್ಮೆ ಇನ್‌ಸ್ಟಾಗ್ರಾಮ್ ನಲ್ಲಿ ಸ್ಕ್ರಾಲ್ ಮಾಡುವ ಪ್ರವೃತ್ತಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಹಣದುಬ್ಬರದೊಂದಿಗೆ ಪರದೆಯ ಸಮಯವನ್ನು ಲಿಂಕ್ ಮಾಡುತ್ತಾ, ಏರುತ್ತಿರುವ ಬೆಲೆಗಳಂತೆ ಪರದೆಯ ಸಮಯ ಸಹ ಏರುತ್ತಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ.

ನಾವು ಫೋನ್ ಬಳಸುತ್ತಿದ್ದೇವೆಯೇ ಅಥವಾ ಫೋನ್ ನಮ್ಮನ್ನು ಬಳಸುತ್ತಿದೆಯೋ..?  ನಾವು ಫೋನ್‌ನ ಬ್ಯಾಟರಿಯನ್ನು ಬಳಸುತ್ತಿದ್ದೇವೆಯೇ ಅಥವಾ ಫೋನ್ ನಮ್ಮ ಮೆದುಳನ್ನು ಬಳಸುತ್ತಿದೆಯೇ..? ಎಂದು ಅವರು ಪ್ರಶ್ನಿಸಿದ್ದಾರೆ. ಕೊನೆಯಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ಇದನ್ನು ಅತ್ಯಂತ ತಮಾಷೆಯಾಗಿ ಕಂಡುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...