alex Certify ‘ಮೊಬೈಲ್‌’ ಪ್ರಿಯರನ್ನು ಸೆಳೆಯುತ್ತಿವೆ ಹೊಸದಾಗಿ ಬಿಡುಗಡೆಯಾಗಿರೋ Redmi ಫೋನ್‌ಗಳು; ಇಲ್ಲಿದೆ ಅದರ ವಿಶೇಷತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೊಬೈಲ್‌’ ಪ್ರಿಯರನ್ನು ಸೆಳೆಯುತ್ತಿವೆ ಹೊಸದಾಗಿ ಬಿಡುಗಡೆಯಾಗಿರೋ Redmi ಫೋನ್‌ಗಳು; ಇಲ್ಲಿದೆ ಅದರ ವಿಶೇಷತೆ….!

ಮೊಬೈಲ್‌ ಪ್ರಿಯರಿಗಾಗಿ ರೆಡ್ಮಿಯ ಎರಡು ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. Redmi A1 ಮತ್ತು Redmi 11 Prime ಫೋನ್‌ಗಳನ್ನು ಕಂಪನಿ ಲಾಂಚ್ ಮಾಡಿದೆ. ಇದೇ ಮೊದಲ ಬಾರಿಗೆ Redmi, Prime 5G ಫೋನ್ ಅನ್ನು ಪರಿಚಯಿಸುತ್ತಿದೆ. ಇದು Mediatek Dimensity 700 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ದೇಶಾದ್ಯಂತ 5G ಅನ್ನು ನೆಟ್ವರ್ಕ್‌ ಅನ್ನು ಬೆಂಬಲಿಸುತ್ತದೆ. ಈ ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ.

Redmi 11 Prime 4G ಆವೃತ್ತಿ Mediatek Helio G99 ಪ್ರೊಸೆಸರ್‌ ಅನ್ನು ಹೊಂದಿದೆ. Redmi A1 ಸ್ಟಾಕ್ ಆಂಡ್ರಾಯ್ಡ್ ಅನ್ನು ಹೊಂದಿರುತ್ತದೆ. ಈ ಫೋನ್ ಭಾರತದಲ್ಲಿ ಮೊದಲು ಬಿಡುಗಡೆಯಾಗುತ್ತಿರುವುದು ವಿಶೇಷ.

Redmi 11 Prime 5G, 4GB +64GB ಆವೃತ್ತಿಯ ಬೆಲೆ 13,999 ರಿಂದ ಪ್ರಾರಂಭ. ಆದರೆ 6GB RAM + 128GB ಆವೃತ್ತಿಯ ಬೆಲೆ 15,999 ರೂಪಾಯಿ ನಿಗದಿಪಡಿಸಲಾಗಿದೆ. Redmi 11 Prime (4G ಆವೃತ್ತಿ) 4GB RAM + 64GB ಆವೃತ್ತಿಗೆ 12,999 ರೂಪಾಯಿ ಇದೆ. ಆದರೆ 6GB RAM ಆಯ್ಕೆ ಮಾಡಿಕೊಂಡ್ರೆ ಗ್ರಾಹಕರು 14,999 ರೂಪಾಯಿ ಪಾವತಿಸಬೇಕು. Redmi A1 2GB RAM+32GB ಆವೃತ್ತಿಗೆ 6,499 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಇದು ಸೆಪ್ಟೆಂಬರ್ 9 ರಂದು ಮಾರಾಟವಾಗಲಿದೆ.

Redmi ಇಂಡಿಯಾ ಇಂದು ಮೂರು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇವೆಲ್ಲವೂ 10 ರಿಂದ 15 ಸಾವಿರ ರೂಪಾಯಿ ಬೆಲೆಬಾಳುವ ಫೋನ್‌ಗಳು. ಇತ್ತೀಚೆಗೆ ಬಿಡುಗಡೆಯಾದ ಹೆಚ್ಚಿನ Redmi ಫೋನ್‌ಗಳ ಬೆಲೆ 15,000 ರೂಪಾಯಿಗಿಂತ ಹೆಚ್ಚಾಗಿಯೇ ಇತ್ತು. Redmi Note 11 SE ಅನ್ನು ಹೊರತುಪಡಿಸಿ 13,999 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿದೆ. ಕುತೂಹಲದ ಸಂಗತಿ ಅಂದ್ರೆ ಬಾಕ್ಸ್‌ನಲ್ಲಿ ಚಾರ್ಜರ್ ಇಲ್ಲದೆ ಬರುವ ಒಂದು Redmi ಫೋನ್ ಕೂಡ ಇಲ್ಲಿದೆ. Redmi A1 ಅಲ್ಟ್ರಾ ಬೆಲೆ 10,000ಕ್ಕಿಂತ ಕಡಿಮೆ ಇರಲಿದೆ ಎಂಬ ನಿರೀಕ್ಷೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...