alex Certify ಮೊದಲ ಸಂಬಳದಿಂದ ತಾವೇನು ಮಾಡಿದ್ವಿ ಅನ್ನೋದನ್ನು ಹಂಚಿಕೊಂಡ್ರು ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಸಂಬಳದಿಂದ ತಾವೇನು ಮಾಡಿದ್ವಿ ಅನ್ನೋದನ್ನು ಹಂಚಿಕೊಂಡ್ರು ನೆಟ್ಟಿಗರು

ಐಎಎಸ್ ಅಧಿಕಾರಿಯೊಬ್ಬರು ಟ್ವಿಟ್ಟರ್‌ನಲ್ಲಿ ಕೇಳಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಛತ್ತೀಸ್‌ಗಢ ಕೇಡರ್‌ನ ಸಿವಿಲ್ ಅಧಿಕಾರಿ ಅವನೀಶ್ ಶರಣ್, ಜನರು ತಮ್ಮ ಉದ್ಯೋಗದ ಮೊದಲ ಸಂಬಳವನ್ನು ಏನು ಮಾಡಿದ್ದಾಗಿ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ. ಮೊದಲ ಸಂಬಳದ ಬಗ್ಗೆ ಅಧಿಕಾರಿ ಪ್ರಶ್ನೆಯೆತ್ತುತ್ತಿದ್ದಂತೆಯೇ ನೆಟ್ಟಿಗರಲ್ಲಿ ಇದು ವಿಭಿನ್ನ ಉತ್ಸಾಹವನ್ನು ಹುಟ್ಟುಹಾಕಿತು. ಇದರ ಪರಿಣಾಮವಾಗಿ ಜನರು ತಮ್ಮ ಮೊದಲ ಸಂಬಳದೊಂದಿಗೆ ಮಾಡಿದ ಅದ್ಭುತ ಸಂಗತಿಗಳನ್ನು ಹೊರಹಾಕಿದ್ದಾರೆ.

ಜನರು ತಮ್ಮ ಮೊದಲ ಸಂಬಳದ ಕಥೆಗಳು ಮತ್ತು ಕೆಲಸಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಇದು ಒಂದು ಹಬ್ಬವಾಗಿಯೇ ಮಾರ್ಪಟ್ಟಿತು. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಮೊದಲ ಸಂಬಳದ 51,000 ರೂ.ಗಳನ್ನು ತಮ್ಮ ಗ್ರಾಮಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ದನದ ಕೊಟ್ಟಿಗೆ ನಿರ್ಮಿಸಲು ಈ ಹಣವನ್ನು ಬಳಸಲಾಗಿದೆ.

ಐಎಎಸ್ ಅಧಿಕಾರಿ ಜಿತಿನ್ ಯಾದವ್ ಅವರು, ಮೊದಲ ಸಂಬಳದ ಚೆಕ್ ಅನ್ನು ತಮ್ಮ ತಾಯಿಗೆ ನೀಡಿದ್ದಾಗಿ ಹಂಚಿಕೊಂಡಿದ್ದಾರೆ. ತಂದೆಗೆ ಫೋನ್ ಮತ್ತು ತಾಯಿಗೆ ಸೀರೆ ಖರೀದಿ, ನಂತರ ಇತರ ಖರ್ಚುಗಳ ನಡುವೆ, ತಿಂಗಳ ಕೊನೆಯಲ್ಲಿ ಏನೂ ಉಳಿದಿಲ್ಲ ಎಂದು ಬಳಕೆದಾರರೊಬ್ಬರು ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ.

ಮತ್ತೊಬ್ಬ ಬಳಕೆದಾರರು ತಮ್ಮ ಪೋಷಕರನ್ನು ಶಾಪಿಂಗ್‌ಗೆ ಕರೆದೊಯ್ದಿದ್ದಾರೆ. ಹಾಗೂ ಬೇಕಾದಷ್ಟು ಐಸ್ ಕ್ರೀಮ್ ತಿಂದಿದ್ದಾಗಿ ಹೇಳಿದ್ದಾರೆ.

ಬಳಕೆದಾರರೊಬ್ಬರು, ತನ್ನ ಪೋಷಕರಿಂದ ಹಣವನ್ನು ತೆಗೆದುಕೊಂಡು ಮನೆ ಬಾಡಿಗೆ ಕಟ್ಟುತ್ತಿದ್ದುದಾಗಿ ಹೇಳಿದ್ದಾನೆ. ಆದರೆ, ನಂತರ ತನ್ನ ಮೊದಲ ಸಂಬಳದಿಂದ ತನ್ನ ಬಾಡಿಗೆಯನ್ನು ಪಾವತಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ ಅವರು ತನ್ನ ತಾಯಿಯೊಂದಿಗೆ ಮೊದಲ ಸಂಬಳದೊಂದಿಗೆ ಬಂದ ಹಣದಿಂದ ಪಾರ್ಟಿ ಮಾಡಿದ್ದಾಗಿ ತಿಳಿಸಿದ್ದಾರೆ. ಮೊದಲ ಸಂಬಳವು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದ್ದು, ಇದು ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿದೆ. ನೀವೂ ಕೂಡಾ ನಿಮ್ಮ ಮೊದಲ ಸಂಬಳದಿಂದ ಏನು ಮಾಡಿದ್ರಿ ಅನ್ನೋದನ್ನ ಹೇಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...