alex Certify ಮೇಘಾಲಯದಲ್ಲಿ ಎಲ್ಲಾ ಕಾಂಗ್ರೆಸ್​ ಶಾಸಕರು ಬಿಜೆಪಿ ಬೆಂಬಲಿತ ಎಂಡಿಎಗೆ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಘಾಲಯದಲ್ಲಿ ಎಲ್ಲಾ ಕಾಂಗ್ರೆಸ್​ ಶಾಸಕರು ಬಿಜೆಪಿ ಬೆಂಬಲಿತ ಎಂಡಿಎಗೆ ಸೇರ್ಪಡೆ

ಮೇಘಾಲಯದಲ್ಲಿ ಐವರು ಕಾಂಗ್ರೆಸ್​ ಶಾಸಕರು ಇಂದು ಬಿಜೆಪಿ ಬೆಂಬಲಿತ ಆಡಳಿತಾರೂಢ ಎಂಡಿಎಗೆ ಸೇರ್ಪಡೆಯಾಗಿದ್ದಾರೆ.

ಒಂದು ಕಾಲದಲ್ಲಿ 17 ಶಾಸಕರೊಂದಿಗೆ ಅಸಾಧಾರಣ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 12 ಶಾಸಕರು ಟಿಎಂಸಿಗೆ ಪಕ್ಷಾಂತರಗೊಂಡ ನಂತರ ಕೇವಲ ಐದು ಶಾಸಕರನ್ನು ಹೊಂದಿತ್ತು.

ಕಾಂಗ್ರೆಸ್​ ಶಾಸಕಾಂಗ ಪಕ್ಷ ಔಪಚಾರಿಕವಾಗಿ ಸಿಎಂ ಕಾನ್ರಾಡ್​ ಕೆ ಸಂಗ್ಮಾರಿಗೆ ಬೆಂಬಲ ಪತ್ರವನ್ನು ಹಸ್ತಾಂತರಿಸಿದೆ. ಕಾಂಗ್ರೆಸ್​ ಪಕ್ಷದಿಂದ ಶಾಸಕರಾಗಿದ್ದ ನಾವು ಇಂದಿನಿಂದ ಮೇಘಾಲಯ ಡೆಮಾಕ್ರಟಿಕ್​ ಅಲಯನ್ಸ್​ ಸರ್ಕಾರವನ್ನು ಸೇರಲು ನಿರ್ಧರಿಸಿದ್ದೇವೆ. ರಾಜ್ಯವನ್ನು ಮುನ್ನಡೆಸಲು ಸರ್ಕಾರಕ್ಕೆ ಇನ್ನಷ್ಟು ಬಲವನ್ನು ನೀಡುವ ಸಲುವಾಗಿ ನಾವು ಎಂಡಿಎಯನ್ನು ಬೆಂಬಲಿಸಲು ಇಚ್ಛಿಸಿದ್ದೇವೆ. ನಮ್ಮ ಈ ಜಂಟಿ ಪ್ರಯತ್ನವು ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತದೆ ಎಂದು ನಂಬಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪತ್ರಕ್ಕೆ ಸಿಎಲ್‌ಪಿ ನಾಯಕ ಅಂಪಾರೀನ್ ಲಿಂಗ್ಡೋಹ್ ಮತ್ತು ಶಾಸಕರಾದ ಪಿಟಿ ಸಾಕ್ಮಿ, ಮೈರಾಲ್‌ಬಾರ್ನ್ ಸೈಯೆಮ್, ಕೆಎಸ್ ಮಾರ್ಬನಿಯಾಂಗ್ ಮತ್ತು ಮೊಹೆಂದ್ರೋ ರಾಪ್ಸಾಂಗ್ ಸಹಿ ಹಾಕಿದ್ದಾರೆ. ಪತ್ರದ ಪ್ರತಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಕಳುಹಿಸಲಾಗಿದೆ.

ಕಾಂಗ್ರೆಸ್ ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವುದರೊಂದಿಗೆ, ಮೇಘಾಲಯ ವಿಧಾನಸಭೆಯಲ್ಲಿ ಟಿಎಂಸಿ ಮಾತ್ರ ವಿರೋಧ ಪಕ್ಷವನ್ನು ಆಕ್ರಮಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...