alex Certify ಮೇಕ್ ಓವರ್ ನಲ್ಲಿ ಅಪ್ಸರೆಯಂತೆ ಕಾಣ್ತಾಳೆ ಇಂಟರ್ನೆಟ್ ಸೆನ್ಸೇಷನ್ ಬಲೂನ್ ಮಾರಾಟಗಾರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕ್ ಓವರ್ ನಲ್ಲಿ ಅಪ್ಸರೆಯಂತೆ ಕಾಣ್ತಾಳೆ ಇಂಟರ್ನೆಟ್ ಸೆನ್ಸೇಷನ್ ಬಲೂನ್ ಮಾರಾಟಗಾರ್ತಿ

ಲಕ್ ಎನ್ನುವುದೇ ಹಾಗೆ, ಯಾರಿಗೆ ಯಾವಾಗ ಬರುತ್ತೆ ಅಂತಾ ಹೇಳಲಿಕ್ಕಾಗುವುದಿಲ್ಲ. ಕೇರಳದ ದಿನಗೂಲಿ ಕಾರ್ಮಿಕ ಮಮ್ಮಿಕ್ಕರ ಒಂದು ಫೋಟೋ ಅವರನ್ನು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಮಾಡಿರುವುದು ನಿಮಗೆ ಗೊತ್ತೇ ಇದೆ. ಇದೀಗ ಕೇರಳದ ಬಲೂನ್ ಮಾರಾಟಗಾರ್ತಿ ಕಿಸ್ಬು ಎಂಬಾಕೆ ರಾತ್ರೋರಾತ್ರಿ ಅಂತರ್ಜಾಲದ ಸಂವೇದನೆಯಾಗಿದ್ದಾರೆ.

ಹೌದು, ಕಿಸ್ಬುವಿನ ಫೋಟೋಶೂಟ್‌ನಿಂದ ಆಕೆಯ ಚಿತ್ರಗಳು ಅಗಾಧ ಪ್ರತಿಕ್ರಿಯೆಯನ್ನು ಪಡೆದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸಂವೇದನೆಯಾಗಿದ್ದಾರೆ. ರಾಜಸ್ಥಾನಿ ಕುಟುಂಬಕ್ಕೆ ಸೇರಿದ ಈ ಯುವತಿಯನ್ನು ಕೇರಳದ ಅಂಡಲೂರ್ ಕಾವು ಉತ್ಸವದಲ್ಲಿ ಫೋಟೋಗ್ರಾಫರ್ ಅರ್ಜುನ್ ಕೃಷ್ಣನ್ ಗುರುತಿಸಿದ್ದರು. ಈಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಬಿರುಗಾಳಿ ಎಬ್ಬಿಸಿತ್ತು. ಬಲೂನ್ ಮಧ್ಯೆ ನಿಂತ ಕಿಸ್ಬು ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದೀಗ  ಮೇಕ್ಅಪ್ ಕಲಾವಿದೆ ರಮ್ಯಾ ಪ್ರಜುಲ್ ಎಂಬುವವರು ಫೋಟೋಶೂಟ್‌ಗಾಗಿ ಕಿಸ್ಬುವನ್ನು ಪರಿವರ್ತಿಸಿದ್ದಾರೆ.

ಉತ್ಸವದಲ್ಲಿ ಪಾಲ್ಗೊಳ್ಳುವ ಸಾವಿರಾರು ಮುಖಗಳ ನಡುವೆ ಜನಮನಕ್ಕೆ ಬಂದ ಅಲೆಮಾರಿ ಯುವತಿ ಪ್ರಸಿದ್ದಿ ಪಡೆದಿದ್ದು, ಆಕೆಯ ಸಹಜ ಸೌಂದರ್ಯದಿಂದ ಎಂದು ರಮ್ಯಾ ಹೇಳಿದ್ದಾರೆ. ಸಹಜವಾಗಿ ಈ ಫೋಟೋ ಕಂಡು ಆಕರ್ಷಿತರಾದ ಮೇಕಪ್ ಕಲಾವಿದೆ ರಮ್ಯಾ, ಕಿಸ್ಬುಳ ಮೇಕ್ ಓವರ್ ಮಾಡಲು ಕುಟುಂಬವನ್ನು ಒಪ್ಪಿಸಿ, ಫೋಟೋಶೂಟ್ ಮಾಡಲಾಗಿದೆ. ಇದರ ಬಗ್ಗೆ ಮೇಕಪ್ ಆರ್ಟಿಸ್ಟ್ ವಿವರಿಸಿದ್ದಾರೆ

ಮೇಕ್ಅಪ್ ಕಲಾವಿದರ ಹೇಳುವ ಪ್ರಕಾರ, ಕಿಸ್ಬುಗೆ ಮೇಕ್ ಓವರ್ ಮಾಡಲು 4 ಗಂಟೆ ಬೇಕಾಯಿತು. ಕ್ಯಾಮರಾಗೆ ಫೋಸ್ ನೀಡುವ ಮುನ್ನ ಫೇಶಿಯಲ್ ಮುಂತಾದವುಗಳನ್ನು ಮಾಡಿಸಬೇಕಾಗಿತ್ತು. ಕಿಸ್ಬುಗೆ ಸಾಂಪ್ರದಾಯಿಕ ಉಡುಪು ಮತ್ತು ಆಧುನಿಕ ಬಟ್ಟೆಯಲ್ಲಿ ಪ್ರತ್ಯೇಕವಾಗಿ ಫೋಟೋಶೂಟ್ ಮಾಡಿಸಲಾಯಿತು. ಇದರಲ್ಲಿ ಕಿಸ್ಬು ಮತ್ತಷ್ಟು ಆಕರ್ಷಣೀಯವಾಗಿ ಕಂಡಿದ್ದು, ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...