alex Certify ಮೂರುವರೆ ಅಡಿ ಯುವಕನಿಗೆ ಕೊನೆಗೂ ಸಿಕ್ಕಿದ್ದಾಳೆ ಜೀವನ ಸಂಗಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರುವರೆ ಅಡಿ ಯುವಕನಿಗೆ ಕೊನೆಗೂ ಸಿಕ್ಕಿದ್ದಾಳೆ ಜೀವನ ಸಂಗಾತಿ

ತನ್ನ ಕುಳ್ಳ ದೇಹದಿಂದಲೇ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಹಾಪುರೆಯ ಮೂರೂವರೆ ಅಡಿ ಎತ್ತರದ ಯುವಕ ಇಬ್ರಾಹಿಂಗೆ ಕೊನೆಗೂ ಜೀವನ ಸಂಗಾತಿ ಸಿಕ್ಕಿದ್ದಾಳೆ. ಇಮ್ರಾನಾ ಎಂಬ ಯುವತಿಯ ಜೊತೆಗೆ ಇಬ್ರಾಹಿಂ ಮದುವೆ ನೆರವೇರಿದೆ. ಇಮ್ರಾನಾ ಕೂಡ ಇಬ್ರಾಹಿಂನಷ್ಟೇ ಎತ್ತರವಿದ್ದಾಳೆ. ಮೀರತ್‌ನ ಕಂಕರ್‌ಖೇಡ ದಲ್ಲಿ ಈ ವಿಶಿಷ್ಟ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.

ಮೀರತ್‌ನ ಕಂಕರ್‌ಖೇಡಾ ಪ್ರದೇಶದ ನಿವಾಸಿಯಾಗಿರೋ ಇಮ್ರಾನಾಳ ಎತ್ತರ 46 ಇಂಚುಗಳು ಅಂದರೆ ಸುಮಾರು ಮೂರೂವರೆ ಅಡಿ. ಇಬ್ರಾಹಿಂ ಎತ್ತರವೂ 46 ಇಂಚು. ಇಬ್ರಾಹಿಂಗೆ 38 ವರ್ಷವಾಗಿದ್ದರೆ, ಇಮ್ರಾನಾಗೆ 36 ವರ್ಷ. ಇಬ್ರಾಹಿಂ ಬಹಳ ದಿನಗಳಿಂದ ಮದುವೆಯ ಕನಸು ಕಾಣುತ್ತಿದ್ದ. ಕುಳ್ಳನಾಗಿದ್ದರಿಂದ ಯಾರೂ ಅವನ ಕೈಹಿಡಿಯಲು ಮುಂದೆ ಬಂದಿರಲಿಲ್ಲ.

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿನಂತೆ ಇಬ್ರಾಹಿಂಗೆ ಸರಿಯಾದ ಜೋಡಿಯೇ ಸಿಕ್ಕಿದ್ದಾಳೆ. ಮದುವೆ ಮಾಡಬೇಕೆಂದು ವಧು, ವರರನ್ನು ಹುಡುಕಿ ಸುಸ್ತಾಗಿದ್ದ ಇಬ್ಬರ ಮನೆಯವರೂ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸಂಬಂಧಿಕರ ಮೂಲಕ ಇಮ್ರಾನಾಳ ವಿಚಾರ ಇಬ್ರಾಹಿಂ ಮನೆಯವರಿಗೆ ತಲುಪಿತ್ತು. ಎರಡೂ ಕುಟುಂಬದವರು ಮೀರತ್‌ ನಲ್ಲಿ ಮಾತುಕತೆ ನಡೆಸಿದ್ದಾರೆ. ಇಬ್ರಾಹಿಂಗೆ ಇಮ್ರಾನಾ ಮೊದಲ ನೋಟದಲ್ಲೇ ಇಷ್ಟವಾಗಿದ್ಲು. ಹಾಗಾಗಿ ಯಾವುದೇ ಸಮಸ್ಯೆ ಇಲ್ಲದೆ ಇವರ ಮದುವೆ ನೆರವೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...