alex Certify ಮೂತ್ರ ಕಟ್ಟಿಕೊಳ್ಳುವ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ, ನಿಮ್ಮ ಪ್ರಾಣಕ್ಕೇ ಇದು ಕುತ್ತು ತರಬಹುದು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂತ್ರ ಕಟ್ಟಿಕೊಳ್ಳುವ ಅಭ್ಯಾಸವಿದ್ದರೆ ಕೂಡಲೇ ಬಿಟ್ಟುಬಿಡಿ, ನಿಮ್ಮ ಪ್ರಾಣಕ್ಕೇ ಇದು ಕುತ್ತು ತರಬಹುದು…..!

ಅನೇಕ ಬಾರಿ ಕೆಲವೊಂದು ಕಾಯಿಲೆಗಳನ್ನು ಖುದ್ದಾಗಿ ನಾವೇ ಆಹ್ವಾನಿಸುತ್ತೇವೆ. ನಮ್ಮ ಕೆಟ್ಟ ಜೀವನ ಶೈಲಿ, ನಾವು ಸೇವಿಸುವ ಆಹಾರವೇ ಅನೇಕ ರೋಗಗಳಿಗೆ ಕಾರಣವಾಗಿಬಿಡುತ್ತದೆ. ಬಹಳ ಸಮಯದವರೆಗೆ ಮೂತ್ರ ಕಟ್ಟಿಕೊಳ್ಳುವ ದುರಭ್ಯಾಸ ಕೂಡ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾರ್ವಜನಿಕ ಶೌಚಾಲಯ, ಕಚೇರಿ, ಬಸ್ ಪ್ರಯಾಣದ ವೇಳೆ ಅಥವಾ ರೈಲಿನಲ್ಲಿ ಹೆಚ್ಚಿನವರು ಮೂತ್ರವನ್ನು ನಿಯಂತ್ರಿಸಿ ಗಂಭೀರ ಕಾಯಿಲೆಗಳಿಗೆ ಆಹ್ವಾನ ನೀಡುತ್ತಾರೆ.

ಬ್ಲಾಡಾರ್‌ನಲ್ಲಿ ದುರ್ಬಲತೆ : ಮೂತ್ರಕೋಶವು ಮೂತ್ರದ ಚೀಲ ಇರುವ ಸ್ಥಳವಾಗಿದೆ. ಇಲ್ಲಿ ಮೂತ್ರವು ಸಂಗ್ರಹವಾಗುತ್ತದೆ. ನೀವು ಮೂತ್ರವನ್ನು ದೀರ್ಘಕಾಲದವರೆಗೆ ಕಟ್ಟಿಕೊಂಡರೆ ಚೀಲದ ಮೇಲೆ ಒತ್ತಡ ಉಂಟಾಗುತ್ತದೆ ಮತ್ತು ಮೂತ್ರಕೋಶವು ದುರ್ಬಲಗೊಳ್ಳುತ್ತದೆ. ಕೆಲವೊಮ್ಮೆ ಮೂತ್ರಕೋಶ ಸಿಡಿಯುವ ಸಾಧ್ಯತೆಯೂ ಇರುತ್ತದೆ.

ಮೂತ್ರನಾಳದ ಸೋಂಕು : ಇತ್ತೀಚಿನ ದಿನಗಳಲ್ಲಿ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಇದೂ ಒಂದು. ದೇಹದ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಬರುತ್ತವೆ. ನಾವು ಮೂತ್ರವನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಂಡರೆ pH ಮಟ್ಟವು ತೊಂದರೆಗೊಳಗಾಗುತ್ತದೆ ಮತ್ತು ಇದು UTI ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಮೂತ್ರಪಿಂಡ ವೈಫಲ್ಯ: ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಶೋಧನೆಯ ಕೆಲಸವನ್ನು ಮಾಡುತ್ತವೆ. ಆದ್ದರಿಂದ ದೀರ್ಘಕಾಲದವರೆಗೆ ಮೂತ್ರವನ್ನು ಕಟ್ಟಿಕೊಂಡರೆ ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ ಕಿಡ್ನಿ ವೈಫಲ್ಯಕ್ಕೂ ಇದು ಕಾರಣವಾಗಬಹುದು.

ದೇಹದಲ್ಲಿ ಊತ: ಸೋಡಿಯಂ ನಮ್ಮ ದೇಹದಿಂದ ಮೂತ್ರದ ಮೂಲಕವೂ ಹೊರಹಾಕಲ್ಪಡುತ್ತದೆ. ಬಹಳ ಸಮಯ ಮೂತ್ರ ಮಾಡದೇ ಹಿಡಿದಿಟ್ಟುಕೊಂಡರೆ ದೇಹದಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ಊತವೂ ಉಂಟಾಗುತ್ತದೆ.

ಜನನಾಂಗದ ನೋವು: ದೀರ್ಘಕಾಲದವರೆಗೆ ಮೂತ್ರವನ್ನು ನಿಯಂತ್ರಿಸಿದಾಗ ಬ್ಲಾಡಾರ್‌ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ನೋವು ಕೂಡ ಬರಬಹುದು. ಅಷ್ಟೇ ಅಲ್ಲ ಕೆಳ ಹೊಟ್ಟೆ ಮತ್ತು ಜನನಾಂಗಗಳಲ್ಲಿ ಸಹ ಇದು ನೋವನ್ನು ಉಂಟುಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...