alex Certify ಮುಸ್ಲಿಂ ವ್ಯಕ್ತಿ ನಿಧನಕ್ಕೆ ದೇಗುಲದ ಉತ್ಸವ ರದ್ದುಗೊಳಿಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ ಈ ಊರಿನ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಂ ವ್ಯಕ್ತಿ ನಿಧನಕ್ಕೆ ದೇಗುಲದ ಉತ್ಸವ ರದ್ದುಗೊಳಿಸಿ ಕೋಮು ಸೌಹಾರ್ದತೆ ಮೆರೆದಿದ್ದಾರೆ ಈ ಊರಿನ ಜನ

ಕೋಮು ಸೌಹಾರ್ದತೆಗೆ ಒಂದು ಸ್ಪಷ್ಟ ಉದಾಹರಣೆ ಎಂಬಂತೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್​​ನಲ್ಲಿನ ದೇವಸ್ಥಾನವೊಂದು ಆ ಪ್ರದೇಶದಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಸಂತಾಪ ಸೂಚಿಸುವ ಸಲುವಾಗಿ ತನ್ನ ಹಬ್ಬದ ಆಚರಣೆಗಳನ್ನು ರದ್ದುಗೊಳಿಸಿದೆ. ತಿರಪ್ಪಂಗೋಡು ಬೀರಂಚಿತ ಪುನ್ನಶ್ಶೇರಿ ದೇವಸ್ಥಾನವು ಚೆರಟಿಲ್​ ಹೈದರ್​ ಅಲಿ ಅವರ ಸಾವಿಗೆ ಗೌರವಾರ್ಥವಾಗಿ ತನ್ನ ತಾಲಪ್ಪೊಲಿ ಆಚರಣೆಯನ್ನು ರದ್ದುಗೊಳಿಸಿದೆ.

ತಾಲಪ್ಪೊಲಿ ಎಂಬುದು ಈ ದೇವಸ್ಥಾನದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ. ಈ ಉತ್ಸವದಲ್ಲಿ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ದೀಪ ಹಾಗೂ ಅಕ್ಕಿ ತುಂಬಿದ ತಟ್ಟೆಯನ್ನು ತೆಗೆದುಕೊಂಡು ಹೋಗುತ್ತಾರೆ.

ಮೃತಪಟ್ಟ ಅಲಿ ಮರದ ವ್ಯಾಪಾರಿಯಾಗಿದ್ದರು ಮತ್ತು ದೇವಸ್ಥಾನದ ಹತ್ತಿರ ವಾಸಿಸುತ್ತಿದ್ದರು ಹಾಗೂ ದೇವಾಲಯದ ಸಮಿತಿ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಕೆಲವು ದಿನಗಳ ಹಿಂದೆ ದೇವಾಲಯದ ಉತ್ಸವ ಆಚರಣೆಗಳು ಪ್ರಾರಂಭವಾಗಿತ್ತು. ಫೆಬ್ರವರಿ 11 ರಂದು ಅಲಿ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಗಳನ್ನು ತಕ್ಷಣವೇ ನಿಲ್ಲಿಸಲಾಗಿದೆ.

ಅಲಿಯವರಿಗೆ ಸಂತಾಪ ಸೂಚಿಸುವ ಸಲುವಾಗಿ ಈ ಎಲ್ಲಾ ಆಚರಣೆಗಳನ್ನು ರದ್ದುಗೊಳಿಸಿದ್ದೇವೆ ಎಂದು ಸಮಿತಿಯು ಘೋಷಣೆ ಮಾಡಿದೆ. ಮೃತ ಹೈದರ್​ ಅಲಿ ನಿವಾಸಕ್ಕೆ ತೆರಳಿದ ದೇವಸ್ಥಾನದ ಸಮಿತಿ ಸದಸ್ಯರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಈ ಕೋಮು ಸೌಹಾರ್ದತೆಯನ್ನು ಶ್ಲಾಘಿಸಿರುವ ತಿರುವನಂತಪುರಂ ಸಂಸದ ಶಶಿ ತರೂರ್,“ಕೇರಳದ ತಿರೂರ್‌ನಲ್ಲಿ ಕೋಮು ಸೌಹಾರ್ದತೆ ಮತ್ತು ಭ್ರಾತೃತ್ವ ನೆಲೆಸಿದೆ, ಆ ಪ್ರದೇಶದಲ್ಲಿ ವಯಸ್ಸಾದ ಮುಸ್ಲಿಂ ವ್ಯಕ್ತಿಯ ಸಾವಿನ ಸುದ್ದಿ ಕೇಳಿ ದೇವಸ್ಥಾನವೊಂದು ತನ್ನ ಉತ್ಸವಗಳು ಮತ್ತು ಆಚರಣೆಗಳನ್ನು ರದ್ದುಗೊಳಿಸಿತು ಎಂದು ಟ್ವೀಟಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...