alex Certify ಮುಟ್ಟು ಪ್ರಾರಂಭವಾಗುವ ಮೊದಲು ದೇಹವು ನೀಡುತ್ತೆ ಈ ಸಂಕೇತ, ಬಹುತೇಕ ಎಲ್ಲಾ ಮಹಿಳೆಯರನ್ನೂ ಕಾಡುತ್ತೆ ಸಮಸ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟು ಪ್ರಾರಂಭವಾಗುವ ಮೊದಲು ದೇಹವು ನೀಡುತ್ತೆ ಈ ಸಂಕೇತ, ಬಹುತೇಕ ಎಲ್ಲಾ ಮಹಿಳೆಯರನ್ನೂ ಕಾಡುತ್ತೆ ಸಮಸ್ಯೆ….!

ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಮತ್ತು ಋತುಚಕ್ರಕ್ಕೂ ಮೊದಲು ಮಹಿಳೆಯರು ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೊಟ್ಟೆ ಉಬ್ಬರಿಸುವುದು, ದೇಹದಲ್ಲಿ ಬಿಗಿತ, ನೋವು ಮತ್ತು ಮೂಡ್ ಸ್ವಿಂಗ್‌ಗಳಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮುಟ್ಟಿನ ಮೊದಲು ಪ್ರತಿ ಬಾರಿಯೂ ಇಂತಹ ಕೆಲವು ಹೊಸ ಸಮಸ್ಯೆಗಳು ಕೂಡ ಕಾಡಬಹುದು. ನಿಮ್ಮ ಜೀವನಶೈಲಿ ಆರೋಗ್ಯಕರವಾಗಿದ್ದರೆ ಋತುಚಕ್ರದ ಮೊದಲು ನಿಮ್ಮ ಅನುಭವವು ವಿಭಿನ್ನವಾಗಿರಬಹುದು.

ಕಾಲು ನೋವು ಮುಟ್ಟಿನ ಆಗಮನದ ಮೊದಲು ಕಾಲುಗಳಲ್ಲಿ ವಿಚಿತ್ರವಾದ ನೋವು ಇರುತ್ತದೆ. ಅಷ್ಟೇ ಅಲ್ಲ, ತೊಡೆಯಲ್ಲೂ ಹಿಗ್ಗಿದ ಅನುಭವವಾಗುತ್ತದೆ. ಮುಟ್ಟಿನ ಆಗಮನದ ಮೊದಲು ಇದ್ದಕ್ಕಿದ್ದಂತೆ  ಪಾದಗಳಲ್ಲಿ ವಿಚಿತ್ರವಾದ ನೋವು ಕಾಣಿಸಿಕೊಳ್ಳುತ್ತದೆ.

ಹೊಟ್ಟೆ, ಸೊಂಟಸುತ್ತ ನೋವು- ಮುಟ್ಟಿನ ಆಗಮನದ ಮೊದಲು ಹೊಟ್ಟೆಯ ಸುತ್ತಲೂ ಸೌಮ್ಯವಾದ ನೋವು ಪ್ರಾರಂಭವಾಗುತ್ತದೆ. ಶೀಘ್ರದಲ್ಲೇ ಪಿರಿಯಡ್ಸ್ ಬರಲಿದೆ ಎಂಬುದರ ಸಂಕೇತ ಅದು. ಪ್ರತಿಯೊಬ್ಬ ಮಹಿಳೆಯೂ ಒಂದೇ ರೀತಿಯ ನೋವನ್ನು ಹೊಂದಿರುವುದು ಅನಿವಾರ್ಯವಲ್ಲ. ಕೆಲವರಿಗೆ ನೋವು ತೀವ್ರವಾಗಿರಬಹುದು, ಕೆಲವರಿಗೆ ಸೌಮ್ಯವಾಗಿರಬಹುದು.

ದೌರ್ಬಲ್ಯ –  ಕೆಲವು ಮಹಿಳೆಯರು ಮುಟ್ಟಿನ ಮೊದಲು ದೌರ್ಬಲ್ಯವನ್ನು ಅನುಭವಿಸುತ್ತಾರೆ. ವಿಪರೀತ ಸುಸ್ತಾಗುತ್ತದೆ. ಈ ಚಿಹ್ನೆಯನ್ನು ಗಮನಿಸಿದಾಗ ಸದ್ಯದಲ್ಲೇ ಪೀರಿಯಡ್ಸ್‌ ಬರಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ.

ಮನಸ್ಥಿತಿ ಬದಲಾವಣೆಮೂಡ್ ಸ್ವಿಂಗ್ಸ್ ಪಿರಿಯಡ್ಸ್ಗೂ ಮೊದಲು ಪ್ರಾರಂಭವಾಗುತ್ತದೆ. ಅದರಿಂದಾಗಿ ಕಿರಿಕಿರಿ, ದುಃಖ, ಉದ್ವೇಗದಂತಹ ಸನ್ನಿವೇಶಗಳು ಸೃಷ್ಟಿಯಾಗಬಹುದು. ಮುಟ್ಟಿಗೂ ಮೊದಲು ಮುಖದಲ್ಲಿ ಮೊಡವೆಗಳು ಏಳಬಹುದು.

ಸ್ತನಗಳಲ್ಲಿ ನೋವು ಅಥವಾ ಗಾತ್ರದಲ್ಲಿ ಬದಲಾವಣೆಮುಟ್ಟಿನ ಆಗಮನದ ಮೊದಲು ಸ್ತನಗಳಲ್ಲಿ ಬದಲಾವಣೆಯಾಗುತ್ತದೆ. ಎದೆಯಲ್ಲಿ ಊತ, ಗಾತ್ರದಲ್ಲಿ ಬದಲಾವಣೆ ಮತ್ತು ನೋವಿನಂತಹ ಸಮಸ್ಯೆಗಳು ಬರುತ್ತವೆ. ಅಂತಹ ಕೆಲವು ಬದಲಾವಣೆಗಳು ಸ್ತನಗಳದಲ್ಲಿ ಕಂಡುಬರುತ್ತವೆ.

ಮುಟ್ಟಿನ ಮೊದಲು ಈ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ ಕೆಲವು ವಿಷಯಗಳ ಬಗ್ಗೆ ಜಾಗರೂಕತೆ ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಆಹಾರ ಕ್ರಮವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಅಂದರೆ ಆರೋಗ್ಯಕರ ಆಹಾರವನ್ನು ಸೇವಿಸಿ. ಪ್ರತಿದಿನ 8 ಗಂಟೆಗಳ ಕಾಲ ನಿದ್ದೆ ಮಾಡಿ. ಈ ಮೂಲಕ ದೇಹಕ್ಕೆ ಗರಿಷ್ಠ ವಿಶ್ರಾಂತಿ ನೀಡಿ. ಶುಚಿತ್ವದ ಬಗ್ಗೆ ಗಮನಹರಿಸುವುದು ಕೂಡ ಬಹಳ ಮುಖ್ಯ. ಉತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...