alex Certify ಮುಟ್ಟಿನ ನೋವಿಗೆ ಮಾತ್ರೆ ಸೇವಿಸಬಹುದೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ನೋವಿಗೆ ಮಾತ್ರೆ ಸೇವಿಸಬಹುದೆ….?

ಮುಟ್ಟಿನ ಸಮಯದಲ್ಲಿ ಕೆಲವರಿಗೆ ವಿಪರೀತ ಹೊಟ್ಟೆ, ಬೆನ್ನು ಅಥವಾ ಮೈಕೈ ನೋವು ಇರುವುದುಂಟು. ಇವರ ಗೋಳಿನ ಕತೆ ಕೇಳುವ ವೈದ್ಯರೂ ಕೆಲವು ಮಾತ್ರೆಗಳನ್ನು ಬಳಸುವಂತೆ ಸಲಹೆ ನೀಡುತ್ತಾರೆ.

ಆದರೆ ಈ ಮಾತ್ರೆಗಳನ್ನು ಎಷ್ಟು ಸೇವಿಸಬೇಕು ಎಂಬುದು ನಿಮಗೆ ತಿಳಿದಿದೆಯೇ…?

ಈ ಸಂದರ್ಭದಲ್ಲಿ ನೀವು ಲಘು ನೋವು ನಿವಾರಕ ಮಾತ್ರೆಗಳನ್ನು ಮಾತ್ರ ಸೇವಿಸಬಹುದು. ತಿಂಗಳ ಈ ನೋವಿಗೆ ನೀವು ಒಂದರಿಂದ ಎರಡು ಮಾತ್ರೆಗಳನ್ನು ತೆಗೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಅದಕ್ಕೂ ಸಹಿಸದ ನೋವಿದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ವಯಸ್ಸು ಹೆಚ್ಚುತ್ತಾ ಹೋದಂತೆ ಈ ನೋವು ಕಡಿಮೆಯಾಗುತ್ತದೆ. ಕೆಲವರಿಗೆ ಹೆರಿಗೆ ಬಳಿಕ ಈ ಹೊಟ್ಟೆನೋವು ಕಾಣಿಸಿಕೊಳ್ಳದೇ ಇದ್ದೀತು. 40ರ ಬಳಿಕದ ಋತುಚಕ್ರದ ತೀವ್ರ ನೋವು ಇತರ ರೋಗಗಳ ಲಕ್ಷಣವಿರಬಹುದು.

ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಬಳಸುವುದರಿಂದ ದೀರ್ಘಕಾಲಿನ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ನೋವು, ಅಸಾಮಾನ್ಯ ಎದೆಬಡಿತ, ವಾಕರಿಕೆ ಮತ್ತು ವಾಂತಿ ಇದರ ಸಾಮಾನ್ಯ ಲಕ್ಷಣಗಳು. ಹೀಗಾಗಿ ಹೆಚ್ಚು ಮಾತ್ರೆಗಳನ್ನು ನೆಚ್ಚಿಕೊಳ್ಳದೆ, ನೈಸರ್ಗಿಕ ಔಷಧಗಳ ಮೊರೆ ಹೋಗಿ, ನಿಮ್ಮ ನೋವನ್ನು ಕಡಿಮೆ ಮಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...