alex Certify ಮುಕೇಶ್​ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದ ಗೌತಮ್​ ಅದಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಕೇಶ್​ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದ ಗೌತಮ್​ ಅದಾನಿ

59 ವರ್ಷದ ಉದ್ಯಮಿ ಗೌತಮ್​ ಅದಾನಿಯವರ ನಿವ್ವಳ ಮೌಲ್ಯವು 88.5 ಶತಕೋಟಿ ಡಾಲರ್​ ಮೀರಿದೆ ಎಂದು ಬ್ಲೂಮ್​ಬರ್ಗ್​ ಬಿಲಿಯೇನರ್ಸ್​ ವರದಿ ಮಾಡಿದೆ.

ಇದು ಮುಕೇಶ್​ ಅಂಬಾನಿ ಅವರ ನಿವ್ವಳ ಮೌಲ್ಯವಾದ 87.9 ಶತಕೋಟಿ ಡಾಲರ್​​ನ್ನು ಮೀರಿಸಿದೆ. ತನ್ನ ವೈಯಕ್ತಿಕ ಸಂಪತ್ತಿನಲ್ಲಿ 12 ಶತಕೋಟಿ ಡಾಲರ್​ ಜಿಗಿತ ಕಾಣುವ ಮೂಲಕ ಅದಾನಿ ಈ ವರ್ಷದಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಸಂಪತ್ತನ್ನು ಗಳಿಸಿದ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಅದಾನಿ ಗ್ರೂಪ್​ ಸೂಕ್ತ ಸಮಯದಲ್ಲಿ ಉದ್ಯಮದ ಎಲ್ಲಾ ವಲಯಗಳನ್ನು ಪ್ರವೇಶಿಸಿದೆ ಹಾಗೂ ಸರಿಯಾಗಿ ಮುನ್ನುಗ್ಗುತ್ತಿದೆ. ಇದು ವಿದೇಶಿ ಬಂಡವಾಳ ಹೂಡಿಕೆದಾರರ ಆಯ್ದ ಬಾಂಡ್ಗಳನ್ನು ಮಾತ್ರ ಆಯ್ಕೆ ಮಾಡಿದೆ ಎಂದು ಮುಂಬೈ ಮೂಲದ ಬ್ರೋಕರೇಜ್​ ಹೆಚ್​ಡಿಎಫ್​​ಸಿ ಸೆಕ್ಯೂರಿಟೀಸ್​ ಲಿಮಿಟೆಡ್​ನ ರಿಟೇಲ್​ ರಿಸರ್ಚ್​ ಮುಖ್ಯಸ್ಥ ದೀಪಕ್​ ಜಸಾನಿ ಹೇಳಿದರು.

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅದಾನಿ ಗ್ರೂಪ್​ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಸಾಧಾರಣ ಪ್ರದರ್ಶನವನ್ನು ಕಂಡಿದೆ. ಅದಾನಿ ಎಂಟರ್​ಪ್ರೈಸಸ್​ನ ಷೇರುಗಳು ಜೂನ್​ 2020ರಿಂದ ಮುಂಬೈನ ರಾಷ್ಟ್ರೀಯ ಸ್ಟಾಕ್​ ಎಕ್ಸ್​ಚೇಂಜ್​​ನಲ್ಲಿ 1000 ಪ್ರತಿಶತಕ್ಕಿಂತ ಹೆಚ್ಚು ಜಿಗಿತ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...