alex Certify ಮುಂಬೈನಲ್ಲಿ ಶುರುವಾಗಲಿದೆ ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್ ಹವಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನಲ್ಲಿ ಶುರುವಾಗಲಿದೆ ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್ ಹವಾ..!

ಮಾಯಾನಗರಿ ಮುಂಬೈನಲ್ಲಿ ಏನುಂಟು ಏನಿಲ್ಲ, ಈ ಹೈ-ಫೈ ಸಿಟಿಗೆ ಶಾಪವಾಗಿರೋದು ಟ್ರಾಫಿಕ್ ಜಾಮ್. ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಮೆಟ್ರೋ, ರೈಲು ವ್ಯವಸ್ಥೆ ಇದ್ದರೂ ಇಲ್ಲಿ ಟ್ರಾಫಿಕ್ ತಲೆನೋವು ಮಾತ್ರ ಕಡಿಮೆ ಆಗ್ತಿಲ್ಲ. ಇದೇ ಕಾರಣಕ್ಕೆ ಈಗ ಇಲ್ಲಿ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್​​ಗಳನ್ನ ರಸ್ತೆಗಿಳಿಸೋ ಪ್ಲಾನ್ ಇಲ್ಲಿನ ಸರ್ಕಾರ ಮಾಡಿದೆ.

ವರದಿ ಪ್ರಕಾರ ಇದೇ ಆಗಸ್ಟ್ 7ರಂದು BEST ಸಂಸ್ಥಾಪನಾ ದಿನದಂದು ಮುಂಬೈನ ರಸ್ತೆಗಳಲ್ಲಿ ಎಸಿ ಡಬಲ್ ಡೆಕ್ಕರ್ ಬಸ್​​ಗಳು ಓಡಾಡೋದು ನೋಡಬಹುದಾಗಿದೆ. ಈ ಡಬಲ್ ಡೆಕ್ಕರ್ ಒಂದು ಬಸ್​ನಲ್ಲಿ 78ರಿಂದ 90 ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಸದ್ಯಕ್ಕೆ 31 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸಲು ಸಹಾಯವಾಗುವ ಉದ್ದೇಶದಿಂದ ಈ ಬಸ್​​ನ್ನ ರಸ್ತೆಗಿಳಿಸುವ ಯೋಜನೆ ಮಾಡಲಾಗಿದೆ. ಈ ಪ್ರಮಾಣ ಇನ್ನೂ 1-2 ಲಕ್ಷ ಹೆಚ್ಚಾಗೋ ಸಾಧ್ಯತೆ ಇದೆ.

ಇಲ್ಲಿ ಗಮನಿಸಬೇಕಾಗಿರೋ ಇನ್ನೊಂದು ವಿಚಾರ ಏನಂದ್ರೆ, 900 ಡಬಲ್ ಡೆಕ್ಕರ್ ಬಸ್ಗಳಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಇನ್ನೂ ಈ ವರ್ಷದ ಅಂತ್ಯದ ವೇಳೆಗೆ 225 ಟ್ವಿನ್ ಡೆಕ್ ಬಸ್​ಗಳನ್ನ ಕೂಡಾ ರಸ್ತೆಗಿಳಿಸುವ ಯೋಜನೆ ಇಲ್ಲಿನ ಸರ್ಕಾರದ್ದಾಗಿದೆ. TOI ವರದಿಯಂತೆ  BESTನ ಮಹಾನಿರ್ದೇಶಕರಾಗಿರುವ ಮ್ಯಾನೇಜರ್ ಲೋಕೇಶ್ ಅವರು ಹೇಳುವ ಪ್ರಕಾರ `ಡಬಲ್ ಡೆಕ್ಕರ್ ಮಾದರಿ ವಿನ್ಯಾಸದ ಕಾರ್ಯ ಈಗಾಗಲೇ ಅಂತಿಮ ಹಂತಕ್ಕೆ ಬಂದು ತಲುಪಿದೆ.

ಇನ್ನು ಕೊನೆಯದಾಗಿ ಫೈನಲ್ ಟಚ್ ಕೊಡುವುದಷ್ಟೆ ಬಾಕಿ ಇದೆ. ಈಗಿರುವ ಡಬಲ್ ಡೆಕ್ಕರ್ ಬಸ್​ಗಳಿಗೆ ಒಂದೇ ಮೆಟ್ಟಿಲುಗಳ ಬದಲಿಗೆ ಎರಡೆರಡು ಮೆಟ್ಟಿಲುಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಬಸ್ ಹತ್ತುವಾಗ, ಇಳಿಯುವಾಗ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜೊತೆಗೆ ಶಬ್ದರಹಿತವಾಗಿರುವ ಎಲೆಕ್ಟ್ರಿಕಲ್ ಮತ್ತು ಹವಾನಿಯಂತ್ರಿತವಾಗಿರುವ ಬಸ್ ಇದಾಗಿದ್ದರಿಂದ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದು,

ಪ್ರಸ್ತುತ ಮುಂಬೈನಾದ್ಯಂತ 16 ಮಾರ್ಗಗಳಲ್ಲಿ 48 ನಾನ್ ಎಸಿ ಬಸ್ ಲಭ್ಯವಾಗಲಿದೆ. ಇದು CSMTನಿಂದ ನಾರಿಮನ್ ಪಾಯಿಂಟ್, ಕೊಲಾಬಾದಿಂದ ವರ್ಲಿ, ಕುರ್ಲಾದಿಂದ ಸಾಂತಾಕ್ರೂಜ್ ಮಾರ್ಗ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಪ್ರಯಾಣಿಕರು ಇದರ ಸೌಲಭ್ಯವನ್ನ ಪಡೆಯಬಹುದು. CSMTನಿಂದ ಬ್ಯಾಕ್ಅಪ್ ಡಿಪೋದಂತಹ ಜನಪ್ರಿಯ ಮಾರ್ಗದಲ್ಲೂ ಡಬಲ್ ಡೆಕ್ಕರ್ ಬಸ್ ಓಡಾಡಲಿದೆ. ಟ್ವಿನ್ ಡೆಕ್ ಫ್ಲೀಟ್ ಗಾತ್ರ ಒಮ್ಮೆ ಜನರ ಗಮನ ಸೆಳೆದರೆ ಸಾಕು, ಮುಂದಿನ ಹಂತದಲ್ಲಿ CSMT-ನಾರಿಮನ್ ಪಾಯಿಂಟ್, ಚರ್ಚ್‌ಗೇಟ್-ಕೊಲಾಬಾ/ಕಫೆ ಪರೇಡ್/ನಾರಿಮನ್ ಪಾಯಿಂಟ್ ಮತ್ತು ವೆಸ್ಟರ್ನ್ ಮತ್ತು ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ, LBS ಮಾರ್ಗ, SV ರಸ್ತೆ ಮತ್ತು P D’Mello ಮಾರ್ಗಗಳಲ್ಲಿ ಹೆಚ್ಚಿನ ಡಬಲ್ ಡೆಕ್ಕರ್‌ಗಳನ್ನು ನಿಯೋಜಿಸಲಾಗುವುದು.

ಈ ವರ್ಷ 225 ಡಬಲ್ ಡೆಕ್ಕರ್ ಮೊದಲ ಹಂತದ ಡಬಲ್ ಡೆಕ್ಕರ್ ಬರಲಿದ್ದು, ಮುಂದಿನ ಹಂತದಲ್ಲಿ 225 ಬಸ್ ಮುಂದಿನ ವರ್ಷ ಅಂದರೆ 2023ರ ಮಾರ್ಚ್​ನಲ್ಲಿ ಬರಲಿದೆ ಅನ್ನೋ ಮಾಹಿತಿ, BEST ನ ಮಹಾನಿರ್ದೇಶಕರಾಗಿರುವ ಲೋಕೇಶ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...