alex Certify ಮಾವು ಮತ್ತು ಪೇರಲ ಹಣ್ಣಿಗಿಂತಲೂ ಹೆಚ್ಚು ಪ್ರಯೋಜನಕಾರಿ ಹಲಸು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾವು ಮತ್ತು ಪೇರಲ ಹಣ್ಣಿಗಿಂತಲೂ ಹೆಚ್ಚು ಪ್ರಯೋಜನಕಾರಿ ಹಲಸು…!

ಈಗಾಗ್ಲೇ ಹಲಸಿನ ಹಣ್ಣಿನ ಸೀಸನ್‌ ಶುರುವಾಗಿದೆ. ಸಸ್ಯಾಹಾರಿಗಳಿಗಂತೂ ಹಲಸಿನ ಹಣ್ಣು ಉತ್ತಮ ಪರ್ಯಾಯವಾಗಿದೆ. ಹಲಸಿನ ಹಣ್ಣು ಮಾತ್ರವಲ್ಲ ಕಾಯಿಯಿಂದಲೂ ತರಹೇವಾರಿ ತಿನಿಸುಗಳನ್ನು ಮಾಡಬಹುದು. ಸಾಂಬಾರ್‌, ಪಲ್ಯ, ಬಿರಿಯಾನಿ, ಗೊಜ್ಜು, ಚಿಪ್ಸ್‌, ಹಪ್ಪಳ ಹೀಗೆ ಹಲಸಿನ ಕಾಯಿಯಿಂದ ಬಗೆಬಗೆಯ ತಿನಿಸುಗಳನ್ನು ತಯಾರಿಸಬಹುದು. ಉತ್ತರ ಭಾರತೀಯರಿಗೆ ಬೇಸಿಗೆ ಕಾಲದಲ್ಲಿ ಹಲಸಿನ ತಿನಿಸುಗಳು ಅಚ್ಚುಮೆಚ್ಚು.

ಮಾಗಿದ ಹಲಸಿನ ಹಣ್ಣು ತಿನ್ನಲು ಬಹಳ ರುಚಿ. ಹಲಸು ತಿಂದರೆ ದೇಹಕ್ಕೆ ಏನಾದರೂ ಲಾಭವಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಹಲಸಿನ ಕಾಯಿ ಉತ್ತಮವೋ ಅಥವಾ ಹಣ್ಣೋ ಎಂಬ ಗೊಂದಲ ಕೂಡ ಸಹಜ. ಈ ಜಾಕ್‌ಫ್ರೂಟ್ ಯಾವುದೇ ಸೂಪರ್‌ಫುಡ್‌ಗಿಂತ ಕಡಿಮೆಯಿಲ್ಲ. ಅಂತಹ ಚಮತ್ಕಾರಿ ಆರೋಗ್ಯಕರ ಗುಣಗಳು ಹಲಸಿನಲ್ಲಿವೆ.

ಹಲಸಿನ ಹಣ್ಣಿನಲ್ಲಿದೆ ಪೌಷ್ಟಿಕಾಂಶಹಲಸಿನ ಹಣ್ಣು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ನಿಧಿಯಾಗಿದೆ. ಇದನ್ನು ಯಾವುದೇ ರೂಪದಲ್ಲಿ ತಿನ್ನಬಹುದು. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಫೈಬರ್ ಅಂಶ ಕೂಡ ಸಾಕಷ್ಟಿದೆ. ಪೇರಲ ಮತ್ತು ಬಾಳೆಹಣ್ಣಿಗಿಂತಲೂ ಹೆಚ್ಚು ಪೋಷಕಾಂಶಗಳು ಹಲಸಿನಲ್ಲಿವೆ. ಸಂಶೋಧನೆಯ ಪ್ರಕಾರ ಹಲಸಿನ ಕಾಯಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಮಾಗಿದ ಹಲಸಿನ ಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಕಾಯಿಗಿಂತ  ಕಡಿಮೆ. ಹಾಗಾಗಿ ಹಲಸಿನ ಕಾಯಿ ಕೂಡ ಹೆಚ್ಚು ಪ್ರಯೋಜನಕಾರಿಯಾಗಿದೆ.

ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆಹಲಸಿನ ಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದನ್ನು ತಡೆಯುತ್ತದೆ. ಮಧುಮೇಹಿಗಳು ಹಲಸಿನ ಹಣ್ಣನ್ನು ಆರಾಮವಾಗಿ ಸೇವಿಸಬಹುದು. ಇದು ಅವರ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ರಕ್ತಹೀನತೆ ನಿವಾರಣೆ ಹಲಸಿನ ಹಣ್ಣಿನಲ್ಲಿ ಬಹಳಷ್ಟು ಜೀವಸತ್ವಗಳು, ಖನಿಜಗಳು ತಾಮ್ರ, ಮ್ಯಾಂಗನೀಸ್, ಮೆಗ್ನೀಸಿಯಮ್, ವಿಟಮಿನ್ ಎ, ಸಿ, ಇ ಇವೆ. ಇದು ದೇಹದಲ್ಲಿ ರಕ್ತವನ್ನು ತಯಾರಿಸಲು ಸಹಕರಿಸುತ್ತದೆ. ಕಬ್ಬಿಣದ ಕೊರತೆಯಿಂದ ಹೆಚ್ಚಿನ ಮಹಿಳೆಯರು ರಕ್ತಹೀನತೆಗೆ ತುತ್ತಾಗುತ್ತಾರೆ. ಹಲಸು ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆ ದೂರವಾಗುತ್ತದೆ.

ಕಣ್ಣುಗಳಿಗೆ ಉತ್ತಮ ಹಲಸಿನ ಹಣ್ಣಿನಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣಿಗೆ ತುಂಬಾ ಪ್ರಯೋಜನಕಾರಿ. ಇದು ಕಾರ್ನಿಯಾದ ಕಾರ್ಯನಿರ್ವಹಣೆಗೆ ಬಹಳಷ್ಟು ಸಹಾಯ ಮಾಡುತ್ತದೆ.

ಮೂಳೆಗಳಿಗೆ ಉತ್ತಮ-  ಹಲಸಿನ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ತಾಮ್ರ, ಸತು ಹೇರಳವಾಗಿದೆ. ಇವು ಮೂಳೆಯನ್ನು ಬಲವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...