alex Certify ಮಾನವೀಯತೆ ಮರೆತ ಮತ್ತೊಂದು ಪ್ರಕರಣ: ಸಹಾಯಕ್ಕಾಗಿ ಬಾಲಕಿ ಯಾಚಿಸುತ್ತಿದ್ದರೂ ವಿಡಿಯೋ ತೆಗೆಯುವುದರಲ್ಲಿ ಜನ ಮಗ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಮರೆತ ಮತ್ತೊಂದು ಪ್ರಕರಣ: ಸಹಾಯಕ್ಕಾಗಿ ಬಾಲಕಿ ಯಾಚಿಸುತ್ತಿದ್ದರೂ ವಿಡಿಯೋ ತೆಗೆಯುವುದರಲ್ಲಿ ಜನ ಮಗ್ನ

ಮಾನವೀಯತೆ ಮರೆತ ಮತ್ತೊಂದು ಪ್ರಕರಣ ವರದಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯೊಬ್ಬಳು ಸಹಾಯಕ್ಕಾಗಿ ಅಂಗಲಾಚುತಿದ್ದರೂ ಸಹ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳಲ್ಲಿ ವಿಡಿಯೋ ತೆಗೆಯುವುದರಲ್ಲಿ ಮಗ್ನರಾಗಿದ್ದು, ಇದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಪ್ರಕರಣದ ವಿವರ: ಉತ್ತರಪ್ರದೇಶದ ಕನೋಜ್ ನಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ನಾಪತ್ತೆಯಾಗಿದ್ದ 13 ವರ್ಷದ ಬಾಲಕಿಯೊಬ್ಬಳು, ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ರಕ್ತದ ನಡುವಿನಲ್ಲಿ ಬಿದ್ದಿದ್ದ ಆಕೆ ಸಹಾಯಕ್ಕಾಗಿ ಯಾಚಿಸುತ್ತಿದ್ದರೂ ಸಹ ಯಾರೊಬ್ಬರ ಮನ ಕರಗಿಲ್ಲ.
ಬದಲಾಗಿ ಆಕೆಯ ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದು, ಕಡೆ ಪಕ್ಷ ಪೊಲೀಸರಿಗೆ ವಿಷಯ ಮುಟ್ಟಿಸಲು ಸಹ ಯಾರೊಬ್ಬರೂ ಪ್ರಯತ್ನಿಸಿಲ್ಲ. ಕಡೆಗೆ ಮಾನವೀಯತೆಯುಳ್ಳ ವ್ಯಕ್ತಿಯೊಬ್ಬ ಪೊಲೀಸರಿಗೆ ವಿಷಯ ಮುಟ್ಟಿಸಿದ ವೇಳೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...