alex Certify ಮಾಜಿ ಸುಂದರಿಯರ ರಹಸ್ಯ ಮದುವೆ….! ಸೌಂದರ್ಯ ಸ್ಪರ್ಧೆ ವೇಳೆ ಮೊಳಕೆಯೊಡೆದಿತ್ತು ಪ್ರೀತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಸುಂದರಿಯರ ರಹಸ್ಯ ಮದುವೆ….! ಸೌಂದರ್ಯ ಸ್ಪರ್ಧೆ ವೇಳೆ ಮೊಳಕೆಯೊಡೆದಿತ್ತು ಪ್ರೀತಿ

ಹವಾನಾ: ಇತ್ತೀಚಿನ ದಿನಗಳಲ್ಲಿ ಸಲಿಂಗ ವಿವಾಹಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಪೋರ್ಟೊ ರಿಕೊದಲ್ಲಿ ಸಲಿಂಗ ವಿವಾಹವು ಕಾನೂನುಬದ್ಧ ಮಾಡಿದ ನಂತರದಲ್ಲಿ ಹೆಚ್ಚು ಹೆಚ್ಚು ವಿವಾಹಗಳು ಆಗಿವೆ. ಇನ್ನು 2020 ರಲ್ಲಿ ಒಂದು ಹೆಜ್ಜೆ ಮುಂದೆ ಹೋದ ಅಲ್ಲಿನ ಕಾನೂನು ವ್ಯವಸ್ಥೆ ಸಲಿಂಗಿ ಕಾಮಿಗಳ ರಕ್ಷಣೆ ಮಾಡುತ್ತಿದೆ. ಜೊತೆಗೆ ಹೊಸ ಕಾನೂನು ಜಾರಿಗೆ ತಂದಿದೆ.

ಇದೀಗ ಮಾಜಿ ಸುಂದರಿಯರಾದ ಅರ್ಜೆಂಟೀನಾದ ಮರಿಯಾನಾ ವರೆಲಾ ಮತ್ತು ಪೋರ್ಟೊ ರಿಕೊದ ಫ್ಯಾಬಿಯೋಲಾ ವ್ಯಾಲೆಂಟಿನ್ ಮದುವೆಯಾಗಿದ್ದಾರೆ. ಈ ವಿಚಾರವನ್ನು ಇಬ್ಬರೂ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ವಿಚಾರ ಬಹಿರಂಗವಾಗ್ತಾ ಇದ್ದಂತೆ, ಲ್ಯಾಟಿನ್ ಅಮೆರಿಕದಾದ್ಯಂತ ಸಲಿಂಗಿ ಸಮುದಾಯ ಸಂಭ್ರಮಾಚರಣೆ ಮಾಡಿದ್ದಾರೆ.

ಇದೇ ಅಕ್ಟೋಬರ್ 28 ರಂದು ಇವರು ಮದುವೆಯಾಗಿದ್ದಾರೆ. ಫೋಟೋದ ಜೊತೆಗೆ ಒಂದು ಒಕ್ಕಣೆಯನ್ನು ಬರೆದುಕೊಂಡಿದ್ದಾರೆ ವಲೆರಾ. ಎಲ್ಲರ ಪ್ರೀತಿಗೆ ಧನ್ಯವಾದಗಳು. ನಾವು ತುಂಬಾ ಸಂತೋಷದಿಂದ ಇದ್ದೇವೆ ಎಂದು ಬರೆದುಕೊಂಡಿದ್ದಾರೆ‌. ಇನ್ನು ಇವರಿಬ್ಬರೂ 2020 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಭೇಟಿಯಾಗಿದ್ದರು. ಮತ್ತು ಅಲ್ಲಿಂದ ತಮ್ಮ ಸ್ನೇಹವನ್ನು ಹೆಚ್ಚು ಮಾಡಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...