alex Certify ಮಹಿಳೆಯರು ಹೃದಯಾಘಾತದಿಂದ ಪಾರಾಗಲು ಸೇವಿಸಬೇಕು ಈ ಸೂಪರ್‌ ಫುಡ್ಸ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ಹೃದಯಾಘಾತದಿಂದ ಪಾರಾಗಲು ಸೇವಿಸಬೇಕು ಈ ಸೂಪರ್‌ ಫುಡ್ಸ್‌….!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚುತ್ತಲೇ ಇದೆ. ನಡೆಯುವಾಗ, ಡ್ಯಾನ್ಸ್ ಮಾಡುವಾಗ ಹೀಗೆ ಅನೇಕ ಸಂದರ್ಭಗಳಲ್ಲಿ ದಿಢೀರ್‌  ಹೃದಯಾಘಾತ ಸಂಭವಿಸುತ್ತಿದೆ. ಇಂತಹ ಸುದ್ದಿಗಳು ಸಹಜವಾಗಿಯೇ ನಮ್ಮಲ್ಲಿ ಆತಂಕ ಹುಟ್ಟಿಸುತ್ತವೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ಹೃದಯಕ್ಕೆ ಹೇಳಿ ಮಾಡಿಸಿದರಂತಹ ಕೆಲವು ಸೂಪರ್‌ ಫುಡ್‌ಗಳನ್ನು ಮಹಿಳೆಯರು ಸೇವನೆ ಮಾಡಬೇಕು. ನಿಮ್ಮ ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇರಿಸಿದರೆ, ಹೃದಯಾಘಾತವಾಗುವ ಸಾಧ್ಯತೆಗಳು ಅತ್ಯಲ್ಪವಾಗುತ್ತವೆ.

ಆಲಿವ್ ಆಯಿಲ್‌ – ಆಲಿವ್ ಎಣ್ಣೆಯಲ್ಲಿ ಅನೇಕ ಎಂಟಿ-ಒಕ್ಸಿಡೆಂಟ್‌ಗಳಿವೆ. ಇದು ರಕ್ತನಾಳಗಳಲ್ಲಿ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಶೇಖರಣೆಯನ್ನು ತಡೆಯುತ್ತದೆ. ದಿನನಿತ್ಯದ ಆಹಾರದಲ್ಲಿ ಆಲಿವ್ ಎಣ್ಣೆಯನ್ನು ಸೇರಿಸಿದರೆ ಅದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಈ ಮೂಲಕ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಜೊತೆಗೆ ಹೃದಯಾಘಾತದಿಂದಲೂ ಪಾರಾಗಬಹುದು.

ಗೆಣಸು – ಸಿಹಿ ಗೆಣಸಿನಲ್ಲಿ ಫೈಬರ್‌ ಸಾಕಷ್ಟು ಪ್ರಮಾಣದಲ್ಲಿದೆ. ವಿಟಮಿನ್ ಎ ಮತ್ತು ಲೈಕೋಪೀನ್ ಎಂಬ ಆರೋಗ್ಯಕರ ಅಂಶಗಳು ಸಹ ಅದರಲ್ಲಿ ಇರುತ್ತವೆ. ಇದು ನಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಸಾಮಾನ್ಯಗೊಳಿಸುತ್ತದೆ. ಸಿಹಿ ಗೆಣಸು ಸೇವನೆಯಿಂದ ರಕ್ತದ ಸಕ್ಕರೆಯ ಪ್ರಮಾಣ ದಿಢೀರನೆ ಹೆಚ್ಚಾಗುವುದಿಲ್ಲ. ಸಿಹಿ ಗೆಣಸನ್ನು ಬೇಯಿಸಿ ತಿನ್ನಬಹುದು ಅಥವಾ ಚಾಟ್‌ ಕೂಡ ಮಾಡಿಕೊಂಡು ಸವಿಯಬಹುದು.

ಕಿತ್ತಳೆಕಿತ್ತಳೆ ಹಣ್ಣಿನಲ್ಲಿರೋ ಆರೋಗ್ಯಕಾರಿ ಅಂಶಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಂತಹ ಆರೋಗ್ಯಕರ ಗುಣಗಳಿವೆ. ಜೊತೆಗೆ ಪೆಕ್ಟಿನ್ ಎಂಬ ಅಂಶವು ಅದರಲ್ಲಿ ಕಂಡುಬರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುವ ಫೈಬರ್. ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ರಕ್ತದೊತ್ತಡ ಸಾಮಾನ್ಯವಾಗಿದ್ದರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...