alex Certify ಮಹಿಳೆಯರು ದೈಹಿಕ ಸಂಬಂಧವನ್ನು ಹೊಂದಲು ಹಿಂಜರಿಯುವುದೇಕೆ….? ಕಾರಣ ತಿಳಿದುಕೊಳ್ಳಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ದೈಹಿಕ ಸಂಬಂಧವನ್ನು ಹೊಂದಲು ಹಿಂಜರಿಯುವುದೇಕೆ….? ಕಾರಣ ತಿಳಿದುಕೊಳ್ಳಿ…..!

ದೈಹಿಕ ಸಂಬಂಧಗಳು ಕೆಲವೊಮ್ಮೆ ನೀರಸವೆನಿಸುತ್ತವೆ. ಇದಕ್ಕೆ ವಯಸ್ಸೂ ಕಾರಣ. ಒಂದು ಹಂತದ ನಂತರ ದೈಹಿಕ ಸಂಬಂಧದಲ್ಲಿ ದಂಪತಿ ಆಸಕ್ತಿ ಕಳೆದುಕೊಳ್ಳಬಹುದು. ದೈಹಿಕ ಸಂಬಂಧವು ಅವರಿಗೆ ಕ್ಷುಲ್ಲಕ ವಿಷಯವಾಗಿ ಕಾಣಬಹುದು. ವಿಶೇಷವಾಗಿ ಮಹಿಳೆಯರು ಇದರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸಂಗಾತಿಯೊಂದಿಗೆ ಭಾವನೆಗಳು ಹೊಂದಿಕೆಯಾಗದಿರಬಹುದು.

ಅದಕ್ಕಾಗಿಯೇ ಮಹಿಳೆಯರು ದೈಹಿಕವಾಗಿ ಸಂಬಂಧ ಬೆಳೆಸಲು ಹೆಚ್ಚು ಆಸಕ್ತಿ ತೋರದೇ ಇರುವ ಸಾಧ್ಯತೆ ಇರುತ್ತದೆ. ಆದಾಗ್ಯೂ ಈ ಸಮಸ್ಯೆಯನ್ನು ಹಲವು ವಿಧಗಳಲ್ಲಿ ನಿಭಾಯಿಸಬಹುದು. ದೈಹಿಕ ಸಂಬಂಧವನ್ನು ಹೊಂದಲು ಮಹಿಳೆಯರು ಹಿಂಜರಿಯುವುದು ಭಾವನಾತ್ಮಕ ಅಥವಾ ದೈಹಿಕ ಕಾರಣಗಳಿಂದಲೂ ಆಗಿರಬಹುದು. ಅದನ್ನು ಅರಿತು ಸರಿಪಡಿಸಿಕೊಂಡಲ್ಲಿ ಸಂಬಂಧಗಳು ಸುಧಾರಿಸುತ್ತವೆ. ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ಶಾರೀರಿಕವಾಗಿ ದೂರ ಸರಿಯಲು ಕಾರಣಗಳೇನು ಎಂಬುದನ್ನು ತಿಳೀಯೋಣ.

ಉತ್ಸಾಹದ ಕೊರತೆಸಂಗಾತಿಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ ದೈಹಿಕ ಸಂಬಂಧಗಳಲ್ಲಿ ಮಹಿಳೆಯರು ಆಸಕ್ತಿ ಹೊಂದಿರುವುದಿಲ್ಲ. ಮಹಿಳೆಯರು ಲೈಂಗಿಕವಾಗಿ ಅತೃಪ್ತರಾಗುತ್ತಾರೆ. ಇದರಿಂದಾಗಿ ಅವರ ಮನಸ್ಸಿನಲ್ಲಿ ಆಸಕ್ತಿಯೇ ಇರುವುದಿಲ್ಲ. ಸಾಮಾನ್ಯವಾಗಿ ಪುರುಷರಿಗೆ ಈ ಸಮಸ್ಯೆಯ ಅರಿವಿರುವುದಿಲ್ಲ, ಹಾಗಾಗಿ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ.

ನೋವು ಕಾರಣ – ದೈಹಿಕ ಸಂಬಂಧದ ಸಮಯದಲ್ಲಿ ಮಹಿಳೆಯರು ನೋವು ಅನುಭವಿಸುತ್ತಾರೆ. ದೇಹದಲ್ಲಿ ಯಾವುದೇ ರೀತಿಯ ಅಡಚಣೆ ಆಗಬಹುದು. ಕಿಬ್ಬೊಟ್ಟೆಯಲ್ಲಿ ನೋವು, ಸೊಂಟದ ತಳದಲ್ಲಿರುವ ಸ್ನಾಯುಗಲ್ಲಿ ಸೆಳೆತ ಸಾಮಾನ್ಯ. ಅದೇ ಸಮಯದಲ್ಲಿ ಇತರ ಹಾರ್ಮೋನುಗಳ ಬದಲಾವಣೆಗಳು ಆಗುವುದರಿಂದ ದೈಹಿಕ ಸಂಬಂಧದಿಂದ ಅವರು ದೂರ ಸರಿಯಬಹುದು. ಇದರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೊಜೆನ್ ಮಟ್ಟವು ಹೆಚ್ಚಾದಾಗ ನೋವು ಅಧಿಕವಾಗುತ್ತದೆ.

ಒತ್ತಡಮಹಿಳೆಯರಲ್ಲಿ ಆತಂಕ ಅಥವಾ ಖಿನ್ನತೆಯ ಸಮಸ್ಯೆ ಹೆಚ್ಚಾಗಿರುತ್ತದೆ. ಇದು ನೇರವಾಗಿ ಅವರ ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಭಾವನಾತ್ಮಕವಾಗಿ ಕೆಟ್ಟ ಸ್ಥಿತಿಯಲ್ಲಿದ್ದಾಗ ದೈಹಿಕ ಸಂಬಂಧವನ್ನು ಹೊಂದಲು ಹಿಂಜರಿಯುತ್ತಾರೆ. ಅವರ ಮನಸ್ಸು ಒತ್ತಡದಿಂದ ಬೇರೇನನ್ನೂ ಯೋಚಿಸಲು ಸಾಧ್ಯವಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...