alex Certify ‘ಮಳೆ-ಬೆಳೆ ಸಂಪಾಯಿತಲೇ ಪರಾಕ್’: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಮೊಳಗಿದ ಕಾರ್ಣಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಳೆ-ಬೆಳೆ ಸಂಪಾಯಿತಲೇ ಪರಾಕ್’: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಮೊಳಗಿದ ಕಾರ್ಣಿಕ

ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಪ್ರಸಕ್ತ ವರ್ಷದ ಭವಿಷ್ಯವನ್ನು ಬಿಂಬಿಸುವ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಹೊರಬಿದ್ದಿದ್ದು, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೊರವಯ್ಯ ರಾಮಣ್ಣ ಕಾರ್ಣಿಕ ಮೊಳಗಿಸಿದ್ದಾರೆ.

ಗೊರವಯ್ಯ ರಾಮಣ್ಣ ‘ಮಳೆ-ಬೆಳೆ ಸಂಪಾಯಿತಲೇ ಪರಾಕ್’ ಎಂದು ಕಾರ್ಣಿಕ ಹೇಳುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮಾಡಿದ್ದಾರೆ. ಕಾರ್ಣಿಕ ನುಡಿಯಂತೆ ಈ ಬಾರಿ ಮಳೆ-ಬೆಳೆ ಸಮೃದ್ಧವಾಗಿರುವ ಜೊತೆಗೆ ಎಲ್ಲರ ಬದುಕು ಸುಗಮವಾಗಲಿದೆ. ರಾಜಕೀಯ, ವಾಣಿಜ್ಯ ಕ್ಷೇತ್ರದಲ್ಲೂ ನೆಮ್ಮದಿ ಇರಲಿದೆ ಎಂದು ಭವಿಷ್ಯ ವಾಣಿಯನ್ನು ವಿಶ್ಲೇಷಿಸಲಾಗಿದೆ.

ಈ ಬಾರಿ ಕೊರೋನಾ ನಿರ್ಬಂಧ ತೆರವುಗೊಳಿಸಿದ್ದ ಕಾರಣ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ಮೂಲಕ ಈ ಕಾರ್ಣಿಕ ಭವಿಷ್ಯವಾಣಿಗೆ ಸಾಕ್ಷಿಯಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...