alex Certify ಮಳೆಯಲ್ಲಿ ಆಟವಾಡುವ ಮಗುವಿನ ವಿಡಿಯೋ ನೋಡಿ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಯಲ್ಲಿ ಆಟವಾಡುವ ಮಗುವಿನ ವಿಡಿಯೋ ನೋಡಿ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು..!

ಮಳೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ….. ಮಳೆಯಲ್ಲಿ ಆಟವಾಡೋದನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಅದರಲ್ಲೂ ಮುಂಗಾರಿನ ಮೊದಲ ಮಳೆಯಲ್ಲೇ ಆಡುವ ಸಂಭ್ರಮವೇ ಬೇರೆ. ಹೀಗೆ ಮಗುವೊಂದು ಮಳೆಯಲ್ಲಿ ಆಟವಾಡುತ್ತಾ ಆನಂದಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೂ ನಿಮ್ಮ ಬಾಲ್ಯದ ದಿನಗಳು ನೆನಪಾಗಬಹುದು.

ಹಳದಿ ರೈನ್‌ಕೋಟ್‌ ಧರಿಸಿದ ಮಗುವೊಂದು ಮಳೆಯನ್ನು ಆನಂದಿಸುತ್ತಿರುವ ವಿಡಿಯೋ ಇದಾಗಿದೆ. ಮಗು ಮಳೆಯೊಂದಿಗೆ ಆಟವಾಡುತ್ತಾ ಹಾಗೆ ರಸ್ತೆಯ ಮೇಲೆ ಮಲಗಿದೆ. ಬ್ಯುಟೆಂಗೆಬೀಡೆನ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ನೆದರ್ಲ್ಯಾಂಡ್ ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಜೂನ್ 9 ರಂದು ಹಂಚಿಕೊಳ್ಳಲಾದ ವಿಡಿಯೋ ಸುಮಾರು 23.3 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

— Buitengebieden (@buitengebieden) June 8, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...