alex Certify ‘ಮಳೆಗಾಲ’ ದಲ್ಲಿ ಕೀಟ ಮನೆಯೊಳಗೆ ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಳೆಗಾಲ’ ದಲ್ಲಿ ಕೀಟ ಮನೆಯೊಳಗೆ ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಯಲ್ಲಿ ಮುಂಗಾರು ಮಳೆ ಈಗಾಗ್ಲೇ ಶುರುವಾಗಿದೆ. ಮೋಡಗಳು, ತುಂತುರು ಮಳೆಯ ಸಿಂಚನ ಜನರನ್ನು ಆಕರ್ಷಿಸುತ್ತದೆ. ಆದರೆ ಮಳೆಗಾಲದಲ್ಲಿ ಕೀಟಗಳ ಸಂಖ್ಯೆಯು ಬಹಳಷ್ಟು ಹೆಚ್ಚಾಗುತ್ತದೆ. ಗಾಳಿಯಲ್ಲಿ ಹಾರುವ ಕೀಟಗಳಲ್ಲದೆ ನೆಲದ ಮೇಲೆ ಹರಿದಾಡುವ ಜೀವಿಗಳ ಹಾವಳಿ ಕೂಡ ಸಾಮಾನ್ಯ. ಇಂತಹ ಕೀಟಗಳು ಮನೆಯೊಳಗೆ ಬರದಂತೆ ತಡೆಯಲು ಕೆಲವೊಂದು ಸುಲಭದ ಟಿಪ್ಸ್‌ ಅನುಸರಿಸಬೇಕು.

ಬೇವಿನ ಎಣ್ಣೆ – ಆಯುರ್ವೇದದ ತಜ್ಞರ ಪ್ರಕಾರ ಮಾನ್ಸೂನ್ ಕೀಟಗಳು ಮನೆಯೊಳಗೆ ಬರದಂತೆ ತಡೆಯಲು ಬೇವಿನ ಎಣ್ಣೆಯನ್ನು ಬಳಸಬೇಕು. ಇದಕ್ಕಾಗಿ ಮೊದಲು ಮನೆಯಲ್ಲಿರುವ ಗಿಡಗಳನ್ನು ಸ್ವಚ್ಛಗೊಳಿಸಿ. ಈ ಸಸ್ಯಗಳಲ್ಲಿ ಕೀಟಗಳು ಅಡಗಿರುತ್ತವೆ. ನಂತರ ಕೀಟಗಳ ಅಡಗುತಾಣದ ಮೇಲೆ ಬೇವಿನ ಎಣ್ಣೆಯನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಕೀಟಗಳು ಅಲ್ಲಿಂದ ಓಡಿಹೋಗುತ್ತವೆ.

ಕಪ್ಪು ಪರದೆ – ರಾತ್ರಿ ದೀಪ ಹಚ್ಚುತ್ತಿದ್ದಂತೆ ಹಾರುವ ಗೆದ್ದಲುಗಳು ಮನೆಯತ್ತ ಆಕರ್ಷಿತವಾಗುತ್ತವೆ. ಅವುಗಳ ಪ್ರವೇಶವನ್ನು ತಡೆಯಲು ಬಾಗಿಲು ಮತ್ತು ಕಿಟಕಿಗಳಿಗೆ ಕಪ್ಪು ಪರದೆಗಳನ್ನು ಹಾಕಬಹುದು. ಹೀಗೆ ಮಾಡುವುದರಿಂದ ಮನೆಯ ಬೆಳಕು ಹೊರಗೆ ಕಾಣಿಸುವುದಿಲ್ಲ ಮತ್ತು ಕೀಟಗಳು ಒಳಗೆ ಬರಲು ಪ್ರಯತ್ನಿಸುವುದಿಲ್ಲ.

ಕಾಳು ಮೆಣಸು – ಕೀಟಗಳ ಹಾವಳಿ ತಡೆಯಲು ಕಾಳು ಮೆಣಸು ಬಹಳ ಪ್ರಯೋಜನಕಾರಿ. ಕಾಳು ಮೆಣಸನ್ನು ರುಬ್ಬಿಕೊಂಡು ನೀರಿನಲ್ಲಿ ಕಲಸಿ. ನಂತರ ಅದನ್ನು ಬಾಟಲಿಯಲ್ಲಿ ತುಂಬಿಸಿಕೊಂಡು ಕೀಟಗಳು ಅಡಗಿರುವ ಸ್ಥಳಗಳ ಮೇಲೆ ಸಿಂಪಡಿಸಿ. ಆಗ ಕೀಟಗಳು ಓಡಿ ಹೋಗುತ್ತವೆ.

ನಿಂಬೆ ಮತ್ತು ಅಡುಗೆ ಸೋಡಾ – ಮಳೆಗಾಲದಲ್ಲಿ ಹೊರಬರುವ ಕೀಟಗಳನ್ನು ದೂರವಿಡಲು ನಿಂಬೆ ಮತ್ತು ಅಡುಗೆ ಸೋಡಾವನ್ನು ಬಳಸಬಹುದು. ಇವೆರಡನ್ನೂ ಬೆರೆಸಿ ದ್ರಾವಣವನ್ನು ಬಾಟಲಿಯಲ್ಲಿ ತುಂಬಿಸಿ. ಅದನ್ನು ಮನೆಯ ಒಳಗಡೆ, ಸುತ್ತಮುತ್ತ ಇರುವ ಗಿಡಗಳು ಮತ್ತು ಮೂಲೆಗಳಿಗೆ ಸಿಂಪಡಿಸಿ. ಆಗ ಕೀಟಗಳು ಅಲ್ಲಿಂದ ದೂರ ಹೋಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...