alex Certify ಮಳೆಗಾಲದಲ್ಲಿ ಫ್ರಿಡ್ಜ್​ನಿಂದ ಬರುವ ವಾಸನೆ ನಿವಾರಿಸಲು ಈ ಟಿಪ್ಸ್​ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಫ್ರಿಡ್ಜ್​ನಿಂದ ಬರುವ ವಾಸನೆ ನಿವಾರಿಸಲು ಈ ಟಿಪ್ಸ್​ ಫಾಲೋ ಮಾಡಿ

ಮಳೆಗಾಲ ಬಂತು ಎಂದರೆ ಸಾಕು ಸಾಕಷ್ಟು ಸಮಸ್ಯೆಗಳು ತನ್ನಿಂದ ತಾನೇ ಆರಂಭವಾಗಿಬಿಡುತ್ತೆ. ಅದರಲ್ಲೂ ಫ್ರಿಡ್ಜ್​​ಗಳಿಗೆ ಮಾನ್ಸೂನ್​ ಸಮಯದಲ್ಲಿ ಶೀಲಿಂಧ್ರಗಳು ದಾಳಿ ಇಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ಫ್ರಿಡ್ಜ್​ನಿಂದ ವಾಸನೆ ಬರಲು ಆರಂಭವಾಗುತ್ತದೆ. ಫ್ರಿಡ್ಜ್​ನಿಂದ ವಾಸನೆ ಬರದಂತೆ ತಡೆಯಲು ಏನು ಮಾಡ್ಬೇಕು..? ಇಲ್ಲಿದೆ ಸ್ಟೋರಿ.

ಮೊದಲನೇಯದಾಗಿ ನೀವು ಕಾಲ ಕಾಲಕ್ಕೆ ಫ್ರಿಡ್ಜ್​​ ಸ್ವಚ್ಛಗೊಳಿಸೋದನ್ನು ರೂಢಿಸಿಕೊಳ್ಳಬೇಕು. ಫ್ರಿಡ್ಜ್​​ನಲ್ಲಿ ಇರುವ ಡೀಪ್​ ಕ್ಲೀನ್​ ಬಟನ್​ನ್ನು 2 ವಾರಕ್ಕೆ ಒಮ್ಮೆಯಾದರೂ ಒತ್ತಿ . ಇದರಿಂದ ಫ್ರೀಜರ್​ನಲ್ಲಿ ಕೆಟ್ಟ ನೀರಿನಿಂದ ನಿರ್ಮಾಣವಾದ ಐಸ್​ಗಳು ಕರಗಿ ಕ್ಲೀನ್​ ಆಗುತ್ತದೆ.

ಬೆಚ್ಚನೆಯ ನೀರಿಗೆ ಸೋಪಿನ ದ್ರಾವಣ ಮಿಶ್ರಣ ಮಾಡಿ ಬಳಿಕ ಅದರಿಂದ ಫ್ರಿಡ್ಜ್​ನ್ನು ಒರೆಸಿ. ಇದಾದ ಬಳಿಕ ಒಣ ಬಟ್ಟೆಯಿಂದ ಬ್ರಿಡ್ಜ್​ನ ಮೂಲೆ ಮೂಲೆಯನ್ನು ಒರೆಸಿರಿ. ಫ್ರಿಡ್ಜ್​ನ ರ್ಯಾಕ್ಸ್​ನ್ನು ಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆಯಿರಿ.

ಇನ್ನು ಫ್ರಿಡ್ಜ್​ನ ವೈಸರ್​ಗಳಲ್ಲಿ ಕೊಳೆ ಸಾಕಷ್ಟು ಇರುತ್ತದೆ, ಇದಕ್ಕೆ ನೀವು ನೀರಿಗೆ ವಿನೆಗರ್​ ಮಿಕ್ಸ್​ ಮಾಡಬೇಕು. ಇದಕ್ಕೆ ಬಟ್ಟೆಯನ್ನು ಅದ್ದಿ. ಆ ಬಟ್ಟೆಯಿಂದ ಫ್ರಿಡ್ಜ್​ನ ವೈಸರ್​ ಸ್ವಚ್ಛಗೊಳಿಸಿ. ಈ ರೀತಿ ಮಾಡೋದ್ರಿಂದ ನಿಮ್ಮ ಪ್ರಿಡ್ಜ್​ನಲ್ಲಿ ಯಾವುದೇ ವಾಸನೆ ಬರೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...